ಗೋವಾ: ರಜನೀಕಾಂತ್ ಸಿನಿಮಾಗಳೆಂದರೆ ಹಾಗೆ. ಎಲ್ಲರೂ ಇಷ್ಟಪಡುತ್ತಾರೆ. ಭಾರತೀಯ ಸಿನಿಮಾಗಳನ್ನು ಅಷ್ಟೊಂದು ನೋಡಿಲ್ಲದ ಕೊರಿಯಾದ ನಿರ್ದೇಶಕರೊಬ್ಬರು ಸೂಪರ್ ಸ್ಟಾರ್ ರಜನೀಕಾಂತ್ ಅವರ “ಮುತ್ತು” ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಪಣಜಿಯಲ್ಲಿ ನಡೆಯುತ್ತಿರುವ 47 ನೇ ಚಲನಚಿತ್ರೋತ್ಸವದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. “ಭಾರತದಲ್ಲಿ ಕೊರಿಯಾ ಸಿನಿಮಾಗಳಿರುವಂತೆ, ಕೊರಿಯಾದಲ್ಲೂ ಭಾರತೀಯ ಸಿನಿಮಾಗಳು ಪರಿಚಿತವಲ್ಲ. ಆದರೆ ಹಿಂದೊಮ್ಮೆ ನಾನು ಮುತ್ತು ಎನ್ನುವ ಭಾರತೀಯ ಸಿನಿಮಾ ನೋಡಿದ್ದೆ. ಅದು ನಿಜಕ್ಕೂ ಕುತೂಹಲಕಾರಿಯಾಗಿತ್ತು” ಎಂದು ರಜನೀಕಾಂತ್ ಸಿನಿಮಾದ ಬಗ್ಗೆ ಹೇಳಿದ್ದಾರೆ.
ಮುತ್ತು ಸಿನಿಮಾ 1995 ರಲ್ಲಿ ರವಿಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಹಾಸ್ಯಮಯ ತಮಿಳು ಸಿನಿಮಾವಾಗಿದೆ. ಇದು ಅಂದು ಸೂಪರ್ ಹಿಟ್ ಆಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ