ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ ಹಾಡುಗಳು ಬಿಡುಗಡೆಯಾಗುತ್ತಿದ್ದ ಹಾಗೇ ಒಂದೊಂದೇ ಸೂಪರ್ ಹಿಟ್ ಆಗುತ್ತಿತ್ತು. ಯೂ ಟ್ಯೂಬ್ ನಲ್ಲಿ ಭಾರೀ ಲೈಕ್ಸ್ ಪಡೆಯುತ್ತಿತ್ತು. ಆದರೆ ಶೆಟ್ಟರ ಒಂದು ಹಾಡು ಈಗ ಎಡವಟ್ಟು ಮಾಡಿಕೊಂಡಿದೆ.
ಕೊನೆಯದಾಗಿ ಬಿಡುಗಡೆಯಾದ ಹೇ ಹೂ ಆರ್ ಯೂ ಹಾಡು ಕಿರಿಕ್ ಮಾಡಿಕೊಂಡಿದೆ. ಇದು ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರದ ಹಾಡಿನ ಟ್ಯೂನ್ ಆಗಿತ್ತು. ಇದು ರವಿಚಂದ್ರನ್ ಮತ್ತು ಹಂಸಲೇಖಾ ಅವರಿಗೆ ಡೆಡಿಕೇಟ್ ಮಾಡಿದ ಹಾಡು ಎಂದು ಚಿತ್ರತಂಡ ಘೋಷಿಸಿತ್ತು.
ಆದರೆ ಈ ಹಾಡಿನ ಟ್ಯೂನ್ ಬಳಕೆಗೆ ಆಕ್ಷೇಪವೆದ್ದಿದೆ. ರವಿಚಂದ್ರನ್ ಅವರ ಈಶ್ವರಿ ಕಂಬೈನ್ಸ್ ನಿರ್ಮಾಣದ ಈ ಚಿತ್ರದ ಹಾಡುಗಳ ಹಕ್ಕು ಲಹರಿ ಸಂಸ್ಥೆಯ ಬಳಿಯಿದೆ. ಆದರೆ ಈ ಹಾಡಿನ ಟ್ಯೂನ್ ಬಳಕೆ ಮಾಡುವ ಮೊದಲು ಕಿರಿಕ್ ಪಾರ್ಟಿ ತಂಡ ಲಹರಿ ಸಂಸ್ಥೆಯಿಂದ ಒಪ್ಪಿಗೆ ಪಡೆದಿರಲಿಲ್ಲ. ಹೀಗಾಗಿ ಕೇಸು ದಾಖಲಿಸದೆ ನಮಗೆ ಬೇರೆ ದಾರಿಯಿಲ್ಲ ಎಂದು ಲಹರಿ ಸಂಸ್ಥೆಯ ವೇಣು ಹೇಳಿದ್ದಾರೆ.
ಹೀಗಾಗಿ ಕಿರಿಕ್ ಪಾರ್ಟಿ ಹಾಡು ಬಳಸಿದ್ದಕ್ಕೆ ಕೋಟಿಗಟ್ಟಲೆ ದಂಡ ತೆರಬೇಕಾಗಿ ಬರಬಹುದು. ಹಳೇ ಹಾಡು ಬಳಸುವ ಮೊದಲು ಎಚ್ಚರಿಕೆ ತೆಗೆದುಕೊಳ್ಳದಿದ್ದರೆ ಹೀಗೇ ಆಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ