Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತ್ತೆ ಅಂಬರೀಶ್ ಮಾಮನ ನೆನೆದು ಭಾವುಕರಾದ ಕಿಚ್ಚ ಸುದೀಪ್

ಮತ್ತೆ ಅಂಬರೀಶ್ ಮಾಮನ ನೆನೆದು ಭಾವುಕರಾದ ಕಿಚ್ಚ ಸುದೀಪ್
ಬೆಂಗಳೂರು , ಶುಕ್ರವಾರ, 30 ನವೆಂಬರ್ 2018 (09:27 IST)
ಬೆಂಗಳೂರು: ಶನಿವಾರ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ರನ್ನು ಕಿಚ್ಚ ಸುದೀಪ್ ಭಾವುಕರಾಗಿ ಸ್ಮರಿಸಿಕೊಂಡಿದ್ದಾರೆ.


ಅಂಬರೀಶ್ ಪಾರ್ಥಿವ ಶರೀರ ನೋಡಲು ಬಂದಿದ್ದ ಸುದೀಪ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಳಿಕ ತಮ್ಮ ಸೋಷಿಯಲ್ ಮಿಡಿಯಾ ಪೇಜ್ ನಲ್ಲಿ ಅಂಬರೀಶ್ ಜತೆಗಿನ ಹಳೆಯ ಫೋಟೋ ಒಂದನ್ನು ಹಾಕಿ ಹಳೆಯ ನೆನಪನ್ನು ಮೆಲುಕು ಹಾಕಿದ್ದರು. ಆದರೆ ಬಳಿಕ ಅಂತ್ಯ ಸಂಸ್ಕಾರಕ್ಕೆ ಬಾರದೇ ಅಚ್ಚರಿ ಮೂಡಿಸಿದ್ದರು.

ಇದೀಗ ಕಿಚ್ಚ ಸುದೀಪ್ ಅಂಬಿ ಮಾಮನ ನೆನೆಸಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ತಂದೆಯ ಜತೆಗೆ ಅಂಬರೀಶ್ ಇರುವ  35

webdunia
ವರ್ಷಗಳ ಹಿಂದಿನ ಫೋಟೋ ಪ್ರಕಟಿಸಿರುವ ಕಿಚ್ಚ, ಮಾಮನಿಗೆ ಆಗ 31 ವರ್ಷವಾಗಿರಬೇಕು. ಎಷ್ಟು ಬೇಗ ಅವರಿಗೆ 66 ವರ್ಷವಾಯಿತು. ಎಷ್ಟು ಬೇಗ ಅವರು ನಮ್ಮನ್ನು ಬಿಟ್ಟು ಹೋದರು. ನನಗೆ ಈಗಲೂ ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸುದೀಪ್ ಭಾವುಕರಾಗಿ ಬರೆದುಕೊಂಡಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ; ಸ್ವಂತ ಜಾಗ ನೀಡಲು ಮುಂದಾದ ವಿಷ್ಣು ಅಭಿಮಾನಿ