ಬೆಂಗಳೂರು: ಕೆನಡಾ ಮತ್ತು ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಜತೆ ಕಿಚ್ಚ ಸುದೀಪ್ ಝೂಮ್ ಆಪ್ ನಲ್ಲಿ ಲೈವ್ ಚ್ಯಾಟ್ ನಡೆಸಲಿದ್ದಾರೆ.
ಈ ಕಾರ್ಯಕ್ರಮ ಭಾನುವಾರ ಅಂದರೆ ಮೇ 31 ರಂದು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 9 ಗಂಟೆಗೆ ನಿಗದಿಯಾಗಿದೆ. ಮಾನಸಿಕ ಸ್ವಾಸ್ಥ್ಯ, ಫಿಟ್ನೆಸ್ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾತುಕತೆ ನಡೆಯಲಿದೆ.
ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಕ್ರಿಕೆಟಿಗರಾದ ಒವೈಸ್ ಶಾ, ಹರ್ಷಲ್ ಗಿಬ್ಸ್ ಮುಂತಾದ ದಿಗ್ಗಜರೂ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನೀವೂ ಭಾಗಿಯಾಗಲು
https://t.co./Nk2hQad1LV ಎಂಬ ವೆಬ್ ವಿಳಾಸಕ್ಕೆ ಹೋಗಿ ರಿಜಿಸ್ಟರ್ ಮಾಡಿಕೊಳ್ಳಬಹುದು.