ಬೆಂಗಳೂರು: ಕಿಚ್ಚ ಸುದೀಪ್ ಗೆ ಅಡುಗೆ ಎಂದರೆ ಪ್ಯಾಶನ್ ಎಂಬುದು ಎಲ್ಲರಿಗೂ ಗೊತ್ತು. ಬಿಗ್ ಬಾಸ್ ಶೋನಲ್ಲೂ ಅಡುಗೆ ಮಾಡಿ ಬಡಿಸಿದ ಪಾಕ ಪ್ರಿಯ ಕಿಚ್ಚ ತಾವು ಮಾಡಿದ ನೀರೂರಿಸುವ ಕೇಕ್ ಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಸದ್ಯಕ್ಕೆ ಹೈದರಾಬಾದ್ ನಲ್ಲಿ ‘ಫ್ಯಾಂಟಮ್’ ಶೂಟಿಂಗ್ ನಲ್ಲಿರುವ ಕಿಚ್ಚ ಅಲ್ಲಿಯೂ ಸಿಗುವ ಸಣ್ಣ ವಿರಾಮವನ್ನೂ ವೇಸ್ಟ್ ಮಾಡದೇ ಕೇಕ್ ಬೇಕ್ ಮಾಡಿದ್ದಾರಂತೆ. ಅಂದ ಹಾಗೆ ಕಿಚ್ಚ ಮಾಡಿದ ಕೇಕ್ ಗಳ ಭಾರೀ ಅಭಿಮಾನಿ ಎಂದರೆ ನಿರ್ದೇಶಕ ಅನೂಪ್ ಭಂಡಾರಿ. ಕಿಚ್ಚ ಮಾಡುವ ಕೇಕ್ ಗಳ ಬಹುಪಾಲನ್ನು ಅವರೇ ತಿಂದು ಮುಗಿಸುತ್ತಾರಂತೆ. ಅಡುಗೆ ತನಗೆ ಪ್ಯಾಶನ್ ಮಾತ್ರವಲ್ಲ, ಒತ್ತಡ ನಿವಾರಿಸಲು ಒಂದು ಸಂವಹನ ಎಂದು ಕಿಚ್ಚ ಹೇಳಿಕೊಂಡಿದ್ದಾರೆ.