ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾವನ್ನು ಕಡೆಗಣಿಸುತ್ತಿದ್ದಾರೆಂಬ ಆರೋಪದಲ್ಲಿ ನಟಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್ ಗೊಳಗಾಗುತ್ತಿದ್ದಾರೆ.
ರಶ್ಮಿಕಾ ಸಂದರ್ಶನದಲ್ಲಿ ನೀಡುವ ಹೇಳಿಕೆಗಳು ಪದೇ ಪದೇ ಟೀಕೆಗೊಳಗಾಗುತ್ತಿರುತ್ತವೆ. ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಹೇಳುವಾಗ ಕೈ ಸನ್ನೆ ಮಾಡಿದ್ದಕ್ಕೆ ಅವರನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು.
ಈ ಬಗ್ಗೆ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲ. 15-20 ವರ್ಷಗಳ ಹಿಂದೆ ಮಾಧ್ಯಮದವರು ನಮ್ಮನ್ನು ಸಂದರ್ಶನ ಮಾಡುತ್ತಿದ್ದರು. ಆಗಿನ ಕಾಲಕ್ಕೆ ಅದು ಹೊಸದು. ಡಾ.ರಾಜ್ ಕುಮಾರ್ ಕಾಲದಲ್ಲಿ ದೂರದರ್ಶನ ಮತ್ತು ಪೇಪರ್ ಬಿಟ್ಟರೆ ಏನೂ ಇರಲಿಲ್ಲ. ಹಾಗಂತ ಅಂದಿನ ಕಾಲವೇ ಚೆನ್ನಾಗಿತ್ತು ಎಂದು ಹೇಳಲಾಗದು. ನಾವು ಪಬ್ಲಿಕ್ ಫಿಗರ್ ಆದ ಮೇಲೆ ಎಲ್ಲವನ್ನೂ ನಿಭಾಯಿಸಲು ಕಲಿಯಬೇಕು. ನಮಗೆ ಹೂಮಾಲೆ ಜೊತೆಗೆ ಮೊಟ್ಟೆ, ಟೊಮೆಟೋ, ಕಲ್ಲುಗಳೂ ನಮ್ಮ ಮೇಲೆ ಬೀಳುತ್ತದೆ ಎಂದು ಸುದೀಪ್ ಹೇಳಿದ್ದಾರೆ.