ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡ ಲಕ್ಷಗಟ್ಟಲೆ ಹಣ ಸುರಿದು ವಿಶೇಷವಾಗಿ ಕಾಡಿನ ಸೆಟ್ ನಿರ್ಮಾಣ ಮಾಡಿತ್ತು. ಅದೀಗ ವೇಸ್ಟ್ ಆಗದಂತೆ ನೋಡಿಕೊಳ್ಳಲಾಗುತ್ತದೆ.
ಹೈದರಾಬಾದ್ ನ ಅನ್ನಪೂರ್ಣೇಶ್ವರಿ ಸೆಟ್ ನಲ್ಲಿ ಕಾಡಿನ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರೀಕರಣ ಮುಗಿದ ಬಳಿಕ ಈ ಸೆಟ್ ನಿರ್ಮಿಸಲು ಬಳಸಿದ ಮರ-ಗಿಡಗಳನ್ನು ಬೆಂಗಳೂರಿನ ಬಿಡದಿಯಲ್ಲಿರುವ ಸ್ಟುಡಿಯೋಗೆ ತಂದು ಇಲ್ಲಿ ಆ ಸೆಟ್ ನ್ನು ಮರುನಿರ್ಮಾಣ ಮಾಡಲಾಗುತ್ತದೆ. ಇದು ಪ್ರವಾಸಿಗರಿಗೆ, ಚಿತ್ರ ನಿರ್ಮಾಪಕರಿಗೆ ಶೂಟಿಂಗ್ ಪ್ರದೇಶವಾಗಿಯೂ ಬಳಸಿಕೊಳ್ಳಬಹುದು. ಇದಕ್ಕಾಗಿ ಈಗಾಗಲೇ ಒಂದು ಸೆಟ್ ಮರಗಳನ್ನು ಇಲ್ಲಿಗೆ ತಂದಿಡಲಾಗಿದೆಯಂತೆ. ಅಂತೂ ಲಕ್ಷಗಟ್ಟಲೆ ಹಣ ಸುರಿದು ಮಾಡಿದ ಸೆಟ್ ಮುಂದೆಯೂ ಬಳಕೆಯಾಗುವಂತೆ ಮಾಡಲಿದೆ ಚಿತ್ರತಂಡ.