ರಕ್ಷಿತ್ ಶೆಟ್ಟಿ ಅಭಿನಯದ ರಿಶಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರ ವಿದೇಶಗಳಿಗೆ ಹಾರಿದೆ. ಜನವರಿ 15ರಂದು ಆಸ್ಟ್ರೇಲಿಯಾದಲ್ಲಿ ಕಿರಿಕ್ ಪಾರ್ಟಿ ಪ್ರದರ್ಶನ ಕಾಣಲಿದೆ. ಈಗಾಗಲೆ ನೆರೆ ರಾಜ್ಯಗಳಲ್ಲೂ ತೆರೆಕಂಡಿರುವ ಕಿರಿಕ್ ಪಾರ್ಟಿ ಇದೀಗ ವಿದೇಶಗಳತ್ತ ಮುಖ ಮಾಡಿದೆ.
ಮೆಲ್ಬೋರ್ನ್ನ ವಿಲೇಜ್ ಸಿನಿಮಾಸ್ - ಫೌಂಟೇನ್ ಗೇಟ್ನಲ್ಲಿ ಜ.15ರಂದು ಸಂಜೆ 4ಕ್ಕೆ ಹಾಗೂ ಜ.22ರಂದು ಪ್ರದರ್ಶನ ಕಾಣಲಿದೆ. ಲಿವರ್ಪೂಲ್ನ ಇವೆಂಟ್ ಸಿನಿಮಾಸ್ನಲ್ಲು ತೆರೆಕಾಣುತ್ತಿದೆ. ಮುಂಬರುರು ದಿನಗಳಲ್ಲಿ ಪರ್ತ್ ಅಡಿಲೆಡ್ ಮತ್ತು ಬಿಸ್ಬೇನ್ ನಲ್ಲೂ ತೆರೆಕಾಣಲಿದೆ ಎನ್ನುತ್ತವೆ ಮೂಲಗಳು.
ಪರಮವ್ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಕಥೆ ಕೂಡ ಅವರದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಸಹ ಚಿತ್ರದಲ್ಲಿ ಪಾಲುದಾರರು.
ರಿಶಬ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಕರಣ್ ಚಾವ್ಲಾ ಕ್ಯಾಮೆರಾ ಇದೆ. ಪಾತ್ರವರ್ಗದಲ್ಲಿ ರಶ್ಮಿಕಾ ಮಂದಣ್ಣ, ಅಚ್ಯುತ ಕುಮಾರ್, ಸಂಯುಕ್ತಾ ಹೆಗ್ಡೆ, ಪ್ರಮೋದ್ ಶೆಟ್ಟಿ ಮುಂತಾದವರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.