ಕನ್ನಡದಲ್ಲಿ ಮತ್ತೆ ಡಬ್ಬಿಂಗ್ ವಿವಾದ ಶುರುವಾಗಿದೆ. ಒಂದು ಕಡೆ ತೀವ್ರ ವಿರೋಧ, ಇನ್ನೊಂದು ಕಡೆ ಡಬ್ಬಿಂಗ್ ಚಿತ್ರಗಳಿಗೆ ಬೆಂಬಲ. ಏತನ್ಮಧ್ಯೆ ನಿರ್ಮಾಪಕ ಕೃಷ್ಣೇಗೌಡ ಡಬ್ಬಿಂಗ್ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾ.11ರಂದು ಕನ್ನಡ ಚಿತ್ರೋದ್ಯಮ ಬಂದ್‌ಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ.
ಆದರೆ ಈ ಬಂದ್‌ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾಗಿಯಾಗುತ್ತಿಲ್ಲ. ಕಾರಣ ಕಾನೂನು ತೊಡಕು ಎನ್ನುತ್ತವೆ ಮೂಲಗಳು. ಆದರೆ ಚಲನಚಿತ್ರ ಕಾರ್ಮಿಕರ ಒಕ್ಕೂಟ, ಕಲಾವಿದರ ಸಂಘ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ರ‍್ಯಾಲಿಯಲ್ಲಿ ಭಾಗಿಯಾಗಲಿದೆ.
ಬಂದ್‍ಗೂ ಮುನ್ನ ಕನ್ನಡಪರ ಸಂಘಟನೆಗಳು, ಗಣ್ಯರು ಮಾರ್ಚ್ 4ರಂದು ಸಭೆ ಸೇರಿ ಚರ್ಚಿಸಲಿದ್ದಾರೆ. ಒಟ್ಟಾರೆಯಾಗಿ ಡಬ್ಬಿಂಗ್ ವಿರೋಧಿಸಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಬಂದ್ ಇದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.