Webdunia - Bharat's app for daily news and videos

Install App

ಕಂಗನಾ ರನೌತ್ ಜೀವನದ ಸಿಕ್ರೇಟ್ ಬಹಿರಂಗ

Webdunia
ಸೋಮವಾರ, 6 ನವೆಂಬರ್ 2023 (11:31 IST)
ಕಂಗನ ತಾಯಿ ತಂದೆ ಸಹ ಆಕೆಯನ್ನು ಭೇಟಿ ಮಾಡ ಬೇಕಾದರೆ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳ ಬೇಕಂತೆ ಅಷ್ಟರಮಟ್ಟಿಗೆ ತನ್ನ ಬದುಕನ್ನು ಕ್ರಮಬದ್ಧವಾಗಿಟ್ಟುಕೊಂಡಿದ್ದಾಳೆ . ಈ ಸಂಗತಿ ಕೇಳಿದ ಅನೇಕ ಬಾಲಿವುಡ್ ಮಂದಿ ಆಶ್ಚರ್ಯಕರ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತ ಪಡಿಸಿದ್ದಾರೆ. 
 
ಬದುಕು ಬಂದಂತೆ ಸ್ವೀಕರಿಸುವ ಗುಣ ನನ್ನದು. ನಾನು ಪ್ರತಿಯೊಂದು ಕೆಲಸವನ್ನು ಯೋಜನಾ ಬದ್ಧವಾಗಿ ಮಾಡುತ್ತೇನೆ. ಒಂದೇ ಬಾರಿ ನಾಲ್ಕೈದು ಕೆಲಸಗಳನ್ನು ಮಾಡುವ ಹುಚ್ಚುತನಕ್ಕೆ ಹೋಗುವುದಿಲ್ಲ. ಆದಷ್ಟು ಪ್ರಶಾಂತವಾಗಿ ಇರಬೇಕು ಎನ್ನುವುದಕ್ಕೆ ಆದ್ಯತೆ ನೀಡುತ್ತೇನೆ. ಯಾವುದೇ ಆಗಿರಲಿ ಸಮಯಕ್ಕೆ ಸರಿಯಾಗಿ ಪೂರೈಸ ಬೇಕು ಎನ್ನುವ ಮನೋ ಭಾವ ಹೊಂದಿದ್ದೇನೆ ಎಂದು ಹೇಳಿದ್ದಾಳೆ ಕಂಗನ ರನೌತ್.
 
ಆದರೆ ಅದರ ಬಗ್ಗೆ ತನಗೆ ಯಾವುದೇ ಬಗೆಯ ಬೇಸರ ಇಲ್ಲ ಎಂದು ಹೇಳಿದ್ದಾಳೆ ಆಕೆ. ನನ್ನ ಈ ವರ್ತನೆ ಕಂಡು ಬೇರೆಯವರಿಗೆ ಈಕೆಗೆ ತಲೆಕೆಟ್ಟಿದೆ ಎಂದು ಅನ್ನಿಸಬಹುದು. ಆದರೆ ಅದರ ಬಗ್ಗೆ ನನಗೆ ಯಾವುದೇ ರೀತಿಯಲ್ಲೂ ಬೇಸರ ಇಲ್ಲ. ನನ್ನ ಪದ್ಧತಿ ಸರಿ ಎಂದು ನಾನು ತಿಳಿದಿದ್ದೇನೆ ಎಂದಿದ್ದಾರೆ. 
 
ನನ್ನ ಸ್ನೇಹಿತರು ಇರುವಾಗ ಅಪ್ಪ ಅಮ್ಮ ಬಂದರೆ ಆಗ ಅವರು ಏನು ಮಾತನಾಡಬೇಕೋ ಗೊತ್ತಾಗದು. ಸರಿ ಎಲ್ಲರ ಜೊತೆ ಮಾತಾಡುತ್ತಾ ಕೂರೋಣ ಎಂದುಕೊಂಡರೆ ಅಪ್ಪ ಅಮ್ಮನ ಜೊತೆ ಮಾತನಾಡುವ ಸಂಗತಿ ಫ್ರೆಂಡ್ಸ್ ಜೊತೆ ಆಗದು. ಸ್ನೇಹಿತರ ಬಳಿ ಹೇಳುವಂತಹದ್ದು  ತಾಯಿತಂದೆ ಬಳಿ ಹೇಳಲಾಗದು. ಆದ್ದರಿಂದ ನನ್ನ ಅಮ್ಮ ಅಪ್ಪ  ಬರುವ ಮುನ್ನ ಫ್ರೀ ಇದ್ದೀಯ ಎಂದು ಮೆಸೇಜ್  ಹಾಕುತ್ತಾರೆ. ನಾನು ಓಕೆ ಅಂದರೆ  ಬರುತ್ತಾರೆ. ಇಲ್ಲವೆಂದರೆ ಬರುವುದಿಲ್ಲ ಎಂದು ಹೇಳಿದ್ದಾಳೆ ಈ ಚೆಲುವೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments