ಥಿಯೇಟರ್ ಓಪನ್ ಗೆ ಅನುಮತಿ : ಕಾಣದಂತೆ ಮಾಯವಾದನು ಮತ್ತೆ ದರ್ಶನ ಭಾಗ್ಯ ಈ ಕೊರೊನಾ ಕಾರಣದಿಂದ ಚಿತ್ರಮಂದಿರ ಸಂಪೂರ್ಣ ಸ್ಥಬ್ಧವಾಗಿತ್ತು. ಇದೀಗ ಚಿತ್ರಮಂದಿರಗಳಿಗೂ ಮರುಜೀವ ಬಂದಿದ್ದು, ಬಾಗಿಲುಗಳನ್ನ ತೆರೆಯಲು ಅನುಮತಿ ಸಿಕ್ಕಂತಾಗಿದೆ. ಆದ್ರೆ ಕೇವಲ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ದೊರೆತಿದೆ. ಹೀಗಾಗಿ ಸ್ಯಾಂಡಲ್ ವುಡ್ ನಲ್ಲಿ ಮರು ಬಿಡುಗಡೆಯ ಪರ್ವಕ್ಕೆ ಮಾರು ಹೋಗಿದ್ದಾರೆ.
ನಿರ್ದೇಶಕರ ಕ್ಯಾಪ್ ತೆಗೆದು ಸಂಪೂರ್ಣ ನಾಯಕನಾಗಿ ಎಂಟ್ರಿ ಕೊಟ್ಟಿದ್ದ ವಿಕಾಸ್ ಸಿನಿಮಾ ಕಾಣದಂತೆ ಮಾಯಾವಾದನು ಒಳ್ಳೆ ಒಪೆನಿಂಗ್ ಪಡೆದುಕೊಂಡಿತ್ತು. ಆದ್ರೆ ಥಿಯೇಟರ್ ಸಮಸ್ಯೆಗಳ ಕಾರಣ ಹೆಚ್ಚು ದಿನ ಚಿತ್ರಮಂದಿರದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಮತ್ತೆ ಸತ್ತರು ತನ್ನ ಪ್ರೇಯಸಿಯನ್ನು ರಕ್ಷಿಸುವ ಆತ್ಮವನ್ನ ನೋಡಲು ಪ್ರೇಕ್ಷಕರಿಗೆ ಅವಕಾಶ ಸಿಕ್ಕಿದೆ.
ಅಕ್ಟೋಬರ್ 15 ರಿಂದ ಸಿನಿಮಾ ಚಿತ್ರಮಂದಿರಗಳ ಬೀಗ ತೆರೆಯಲಿದ್ದು, ಅಂದೇ ಕಾಣದಂತೆ ಮಾಯಾವಾದನು ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈ ಬಗ್ಗೆ ನಿರ್ದೇಶಕ ರಾಜ್ ಪತ್ತಿಪಾಟಿ ವಿಕಾಸ್ ಸಿನಿಮಾಗೆ ಒಳ್ಳೆಯ ರಿವೀವ್ ಬಂದಿತ್ತು.
ಜನರು ಮೆಚ್ಚಿಕೊಂಡಿದ್ರು. ಬಟ್ ನಾವು ಒಂದಿಷ್ಟು ಸೀನ್ಗಳನ್ನು ತುಂಬಾ ಟ್ರಿಮ್ ಮಾಡಿದ್ವಿ. ಕಥೆಗೆ ಹೆಚ್ಚು ಇಂಪಾರ್ಟೆನ್ಸ್ ಕೊಟ್ಟು ಕೆಲವು ಸೀನ್ಗಳನ್ನು ಟ್ರಿಮ್ ಮಾಡಿದ್ವಿ. ಆದ್ರೀಗ ಒಂದಿಷ್ಟು ಬದಲಾವಣೆಯೊಂದಿಗೆ ಮರು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಜನರಿಗೆ ಖಂಡಿತ ಮೊದಲಿಗಿಂತ ಈ ಬಾರಿ ಹೆಚ್ಚಾಗಿ ಸಿನಿಮಾ ಇಷ್ಟವಾಗುತ್ತೆ ಅನ್ನೋದು ನಮ್ಮ ಅಭಿಪ್ರಾಯ ಎಂದಿದ್ದಾರೆ.
‘ಕಾಣದಂತೆ ಮಾಯವಾದನುʼ ಚಿತ್ರದಲ್ಲಿ ಲವರ್ ಬಾಯ್, ಆಕ್ಷನ್ ಹೀರೋ ಆಗಿ ವಿಕಾಸ್ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಸಿಂಧೂ ಲೋಕ್ನಾಥ್ ನಟಿಸಿದ್ದಾರೆ. ಲವ್ ಫ್ಯಾಂಟಸಿ, ಹಾರಾರ್, ಆಕ್ಷನ್, ಸಸ್ಪೆನ್ಸ್ ಎಲ್ಲಾ ಎಲಿಮೆಂಟ್ಗಳನ್ನು ಇಟ್ಟುಕೊಂಡು ಸಿನಿಮಾ ತಯಾರಿಸಲಾಗಿದೆ.
ಅಚ್ಯುತ್ ಕುಮಾರ್, ಭಜರಂಗಿ ಲೋಕಿ ಸೇರಿದಂತೆ ಅನೇಕರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಷ್ಪ ಸೋಮ್ ಸಿಂಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
Trailer link : https://www.youtube.com/watch?v=XLhuXhJRNMc