ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ವೃತ್ತಿ ವೈಷಮ್ಯ ಕಾರಣವಾಯಿತೇ? ಈ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತ, ಗಾಡ್ ಫಾದರ್ ಗಳಿಲ್ಲದೇ ಚಿತ್ರರಂಗಕ್ಕೆ ಬಂದವರನ್ನು ತುಳಿಯಲಾಗುತ್ತದೆ. ಇಂತಹ ವೈಷಮ್ಯದಿಂದಾಗಿಯೇ ಸುಶಾಂತ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಅಭಿಮಾನಿಗಳು, ಬಾಲಿವುಡ್ ನ ಕೆಲವು ಮಂದಿ ದೂರಿದ್ದರು.
ಕಳೆದ ಆರು ತಿಂಗಳಲ್ಲಿ ಸುಶಾಂತ್ ಕೈಯಲ್ಲಿದ್ದ ಒಟ್ಟು ಏಳು ಸಿನಿಮಾಗಳು ಕೈ ತಪ್ಪಿ ಹೋಗಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಅವರು ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ವೃತ್ತಿ ವೈಷಮ್ಯವೇ ಸಾವಿಗೆ ಕಾರಣವಾಯಿತೇ ಎಂಬ ದಿಕ್ಕಿನಲ್ಲಿ ತನಿಖೆ ನಡೆಯಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.