ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರಿಗೆ ಡ್ರಗ್ ಹಂಚಿಕೆ ಮಾಡುತ್ತಿದ್ದ ಡ್ರಗ್ ಕಿಂಗ್ ಪಿನ್ ಅನಿಕಾ ಮತ್ತು ಗ್ಯಾಂಗ್ ಬಂಧನದ ಬಳಿಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೆಲವು ನಟ-ನಟಿಯರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನ ಈಗಿನ ತಲೆಮಾರಿನ ನಟ-ನಟಿಯರು ಡ್ರಗ್ ನಶೆಯಲ್ಲೇ ಶೂಟಿಂಗ್ ಸೆಟ್ ಗೆ ಬರ್ತಾರೆ. ತಮ್ಮ ವ್ಯಾನಿಟಿ ವ್ಯಾನ್ ನಲ್ಲಿ ಡ್ರಗ್ ಪಾರ್ಟಿ ಮಾಡ್ತಾರೆ. ಖ್ಯಾತ ನಟನೊಬ್ಬರ ಫಾರ್ಮ್ ಹೌಸ್ ನಲ್ಲಿ ರಾತ್ರಿಯಿಡೀ ಡ್ರಗ್ ಪಾರ್ಟಿ ನಡೆಯುತ್ತದೆ. ಇದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲಿ.
ಕೊರೋನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಎಷ್ಟೋ ಕಾರ್ಮಿಕರು ಊಟಕ್ಕೂ ಗತಿಯಿಲ್ಲದೇ ಪರದಾಡುತ್ತಿದ್ದಾಗ ಈ ನಟ-ನಟಿಯರು ಡ್ರಗ್ಸ್ ಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ ಎಂದು ಅವರು ಆರೋಪ ಮಾಡಿದ್ದಾರೆ.