ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಸಿನಿಮಾದಲ್ಲಿ ನಟಿಸಲು ನಟಿ ದೀಪಿಕಾ ಪಡುಕೋಣೆ ದೊಡ್ಡ ಮೊತ್ತದ ಸಂಭಾವನೆ ಪಡೆದ ಬಳಿಕ ಇದೀಗ ಈ ಚಿತ್ರದಲ್ಲಿ ಸಂಗೀತ ಸಂಯೋಜನೆ ಮಾಡಲು ಸಂಗೀತ ನಿರ್ದೇಶಕರೊಬ್ಬರು ದೊಡ್ಡ ಮೊತ್ತದ ಸಂಭಾವನೆ ಕೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೌದು. ಪ್ರಭಾಸ್ ಅವರ ಮುಂದಿನ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಚಿತ್ರದ ನಿರ್ಮಾಪಕರ ಬಳಿ ದೊಡ್ಡ ಮಟ್ಟದ ಸಂಭಾವನೆ ಕೇಳಿದ್ದಾರಂತೆ.
ರೆಹಮಾನ್ ಅವರು 4.50 ಕೋಟಿ ಸಂಭಾವನೆ ಕೇಳಿದ್ದು, ಇದಕ್ಕೆ ನಿರ್ಮಾಪಕರು ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.