Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊಂಬಾಳೆ ಫಿಲಂಸ್ ಘೋಷಿಸಿದ ಎರಡು ಬಿಗ್ ಸಿನಿಮಾಗಳ ಡಿಫರೆಂಟ್ ಟೈಟಲ್ ಗಳ ಅರ್ಥಗಳು

ಹೊಂಬಾಳೆ ಫಿಲಂಸ್ ಘೋಷಿಸಿದ ಎರಡು ಬಿಗ್ ಸಿನಿಮಾಗಳ ಡಿಫರೆಂಟ್ ಟೈಟಲ್ ಗಳ ಅರ್ಥಗಳು
ಬೆಂಗಳೂರು , ಸೋಮವಾರ, 21 ಡಿಸೆಂಬರ್ 2020 (08:55 IST)
ಬೆಂಗಳೂರು: ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಎರಡು ಬಿಗ್ ಸಿನಿಮಾಗಳನ್ನು ಒಂದಾದ ಮೇಲೊಂದರಂತೆ ಘೋಷಣೆ ಮಾಡಿದೆ.


ಪ್ರಭಾಸ್ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’. ಈ ಸಿನಿಮಾ ಟೈಟಲ್ ನೋಡಿ ಎಲ್ಲರೂ ಇದರ ಅರ್ಥವೇನು ಎಂದು ತಲೆಕೆಡಿಸಿಕೊಂಡಿದ್ದರು. ಇದರ ಅರ್ಥವನ್ನು ಕೊನೆಗೆ ನಿರ್ದೇಶಕ ಪ್ರಶಾಂತ್ ನೀಲ್ ಕೊಡಬೇಕಾಯಿತು. ಸಲಾರ್ ಎಂದರೆ ಧೈರ್ಯವಂತ ನಾಯಕ ಎಂಬ ಅರ್ಥವಿದೆ. ಇದೀಗ ಹೊಂಬಾಳೆ ಫಿಲಂಸ್ ಶ್ರೀಮುರಳಿ ನಾಯಕರಾಗಿ ‘ಬಘೀರ’ ಎಂಬ ಸಿನಿಮಾ ಘೋಷಿಸಿದೆ. ಬಘೀರ ಎಂದರೆ ಅರ್ಥವೇನು ಎಂದು ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗಲ್ಲ. ಬಘೀರ ಎಂದರೆ ‘ಜಂಗಲ್ ಬುಕ್’ ಪುಸ್ತಕದಲ್ಲಿ ಬರುವ ಕಥಾಪಾತ್ರವಾಗಿತ್ತು. ಈ ಕಥಾಪಾತ್ರದಲ್ಲಿ ಬರುವ ಬಘೀರ ಪಾತ್ರ ಸಾಹಸಿ, ಧೈರ್ಯವಂತ, ಯಾವುದಕ್ಕೂ ಹೆದರದ ನಾಯಕ. ಈ ಸಿನಿಮಾದ ಟೈಟಲ್ ಕೂಡಾ ಹೆಚ್ಚು ಕಡಿಮೆ ಅದೇ ಅರ್ಥವನ್ನು ಹೊಂದಿದೆ. ಅದಕ್ಕೆ ತಕ್ಕಂತೆ ಅಡಿಬರಹವನ್ನೂ ಕಾಣಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಜೆಕೆ ಅಭಿನಯದ ಐರಾವನ್ ಟೀಸರ್ ಇಂದು ಲಾಂಚ್