Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೋಳಿ ಹಬ್ಬ ರಜಿನಿಕಾಂತ್ ಜೀವನಕ್ಕೆ ಹೊಸ ಟ್ವಿಸ್ಟ್ ಕೊಟ್ಟ ದಿನ..

ಹೋಳಿ ಹಬ್ಬ ರಜಿನಿಕಾಂತ್ ಜೀವನಕ್ಕೆ ಹೊಸ ಟ್ವಿಸ್ಟ್ ಕೊಟ್ಟ ದಿನ..
ಚೆನ್ನೈ , ಮಂಗಳವಾರ, 14 ಮಾರ್ಚ್ 2017 (12:21 IST)
ರಜಿನಿಕಾಂತ್.. ತಮಿಳು ಚಿತ್ರರಂಗದ ಸೂಪರ್ ಸ್ಟಾರ್.. ರಜಿನಿ ಖಡಕ್ ಡೈಲಾಗ್, ವಾಕಿಂಗ್ ಸ್ಟೈಲ್`ಗೆ ಹುಚ್ಚೆದ್ದು ಕುಣಿಯುವ ಲಕ್ಷ ಲಕ್ಷ ಅಭಿಮಾನಿಗಳಿದ್ದಾರೆ. ಹೋಳಿ ಹಬ್ಬದಂದು ಇಡೀ ದೇಶಕ್ಕೆ ದೇಶವೇ ಬಣ್ಣ ಹಚ್ಚಿ ಸಂಭ್ರಮಿಸಿದರೆ  ಸೂಪರ್ ಸ್ಟಾರ್ ರಜಿನಿ ಮಾತ್ರ ಬಣ್ನದ ತಂಟೆಗೆ ಹೋಗಲ್ಲ. ಆದರೆ, ಪ್ರತೀ ಹೋಳಿಹಬ್ಬದಂದು ರಜಿನಿ ಒಬ್ಬ ವಿಶಿಷ್ಟ ವ್ಯಕ್ತಿಯ ಭೇಟಿಗೆ ತೆರಳುತ್ತಾರೆ.

ರಜಿನಿ ಬಣ್ಣದ ಬದುಕು ಆರಂಭವಾಗಿದ್ದೇ ಹೋಳಿಯಂದು: ಸೂಪರ್ ಸ್ಟಾರ್ ರಜಿನಿಕಾಂತ್ ಬೆಂಗಳೂರಿನ ಬಿಎಂಟಿಸಿ ಬಸ್`ನಲ್ಲಿ ಕಂಡಕ್ಟರ್ ಆಗಿದ್ದವರು. ಇದೇ ಸಂದರ್ಭದಲ್ಲಿ ತಮಿಳು ನಿರ್ದೇಶಕ ಕೆ. ಬಾಲಚಂದರ್ ಅಪೂರ್ವ ರಾಗಂಗಲ್ ಚಿತ್ರಕ್ಕೆ ನಟನ ಹುಡುಕಾಟದಲ್ಲಿದ್ದರು. ಈ ಸಂದರ್ಭ ಬಾಲಚಂದರ್ ಕಣ್ಣಿಗೆ ಬಿದ್ದವರೇ ಶಿವಾಜಿರಾವ್ ಅಲಿಯಾಸ್ ರಜಿನಿಕಾಂತ್ ಅವರನ್ನ ಚಿತ್ರದಲ್ಲಿ ನಟಿಸುವಂತೆ ಕರೆದೊಯ್ದ ಬಾಲಚಂದರ್ ಅವರು ಸಿನಿಮಾ ಸ್ಸ್ಟೈಲ್`ಗೆ ಒಪ್ಪುವ ಹೆಸರಿಡಲು ನಿರ್ಧರಿಸಿದ್ದರು. ಶಿವಾಜಿರಾವ್ ಬದಲಿಗೆ ಅಂದಿನ ಕಾಲದಲ್ಲಿ ಟ್ರೆಂಡ್ ಆಗಿದ್ದ ಕಾಂತ್ ಪದವನ್ನೊಳಗೊಂಡ ಚಂದ್ರಕಾಂತ್, ಶ್ರೀಕಾಂತ್ ಮತ್ತು ರಜಿನಿಕಾಂತ್ ಎಂಬ ಮೂರು ಹೆಸರು ಸೂಚಿಸಿದ್ದರು. ಗುರುದೇವೋಭವ ಎಂಬಂತೆ ಹೆಸರು ಆಯ್ಕೆ ಮಾಡಲು ಬಾಲಚಂದರ್ ಅವರನ್ನೇ ಕೇಳಿಕೊಂಡರು ಶಿವಾಜಿರಾವ್, ಆಗ ಬಾಲಚಂದರ್ ರಜಿನಿಕಾಂತ್ ಹೆಸರನ್ನ ಫೈನಲ್ ಮಾಡಿದರು. ಈ ಎಲ್ಲ ಘಟನೆ ನಡೆದಿದ್ದು ಹೋಳಿಹಬ್ಬದಂದು ಅಂದು ಬಣ್ನದಲೋಕಕ್ಕೆ ಎಂಟ್ರಿಕೊಟ್ಟ ರಜಿನಿ ಹೊಸ ಹೆಸರನ್ನೂ ಪಡೆದರು.

ಪ್ರತೀ ಹೋಳಿಹುಣ್ಣಿಮೆಗೆ ಗುರುಗಳ ಭೇಟಿ; ರಜಿನಿಕಾಂತ್ ಏನನ್ನಾದರೂ ಮರೆಯಬಹುದು ಆದರೆ ತಮಗೆ ದಾರಿ ತೋರಿದ ಗುರು ಬಾಲಚಂದರ್ ಭೇಟಿಯನ್ನು ಮಾತ್ರ ಮರೆತಿರಲಿಲ್ಲ.  ಪ್ರತೀ ಹೋಳಿಹಬ್ಬದಂದು ಅವರ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು. ಒಮ್ಮೆ ಸ್ವಲ್ಪ ವಿಳಂಬವಾದುದರಿಂದ ಸೂಪರ್ ಸ್ಟಾರ್ ರಜಿನಿಕಾಂತ್, ಬಾಲಚಂದರ್ ಅವರ ಬಳಿ ಕ್ಷಮೆ ಕೇಳಿದ್ದೂ ಇದೆ. ಆದರೆ, 2014ರಲ್ಲಿ ಬಾಲಚಂದರ್ ನಿಧನರಾಗಿದ್ದು, ರಜಿನಿಕಾಂತ್`ಗೆ ಗುರುಗಳ ಭೇಟಿ ಅವಕಾಶ ತಪ್ಪಿದೆ. ಹೀಗಾಗಿ, ಪ್ರತೀ ಹುಟ್ಟುಹಬ್ಬದಂದು ಗುರುಗಳನ್ನ ನೆನಪಿಸಿಕೊಂಡು ಬರ್ತ್ ಡೇ ಆಚರಿಸಿಕೊಳ್ಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಮತ್ತು ಸುದೀಪ್ ವಿವಾದ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರವಿದು