ಚೆನ್ನೈ : ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ನಟ ವಿಜಯ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹಿಂದಿನಿಂದಲೂ ಕೇಳಿಬರುತ್ತಿದೆ. ಇದಕ್ಕೆ ಮೊದಲ ಬಾರಿಗೆ ಗಣ್ಯ ವ್ಯಕ್ತಿಯೊಬ್ಬರು ಬೆಂಬಲ ಸೂಚಿಸಿದ್ದಾರೆ.
ಹೌದು. ವಿಜಯ್ ತಂದೆ ಎಸ್.ಎ.ಚಂದ್ರಶೇಖರ್ ಅವರು ಬಿಜೆಪಿ ಸೇರಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ ಸಂದರ್ಶನವೊಂದರಲ್ಲಿ ಅವರ ಬಳಿ ಈ ಬಗ್ಗೆ ಕೇಳಿದಾಗ ನಾನು ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ. ನನಗೆ ಒಂದು ಸಂಸ್ಥೆ ಇದೆ. ಆದರೆ ಜನರ ಚಳುವಳಿಗೆ ಅಗತ್ಯವಿದ್ದಾಗ ಜನರು ಕರೆದಾಗ ವಿಜಯ್ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಈ ನಡುವೆ ಈ ಬಗ್ಗೆ ಮಾತನಾಡಿದ ಎಐಎಡಿಎಂಕೆ ಸಚಿವ ಪಾಂಡಿಯರಾಜನ್, ವಿಜಯ್ ಜಯಲಲಿತಾ ಅವರು ಇರುವಾಗಲೇ ಎಐಎಡಿಎಂಕೆ ಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದಕಾರಣ ವಿಜಯ್ ತಮ್ಮ ಜನರ ಚಳುವಳಿಗಾಗಿ ರಾಜಕೀಯ ಪಕ್ಷವಾಗಲಿದ್ದಾರೆ ಎಂಬ ಅವರ ತಂದೆಯ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.