ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟ ಹರೀಶ್ ಎರಡನೇ ಬಾರಿ ತಂದೆಯಾದ ಖುಷಿಯಲ್ಲಿದ್ದಾರೆ. ಎರಡನೇ ಬಾರಿಗೆ ಅವರಿಗೆ ಹೆಣ್ಣುಮಗುವಾಗಿದೆ.
ಈ ಸಂತಸದ ವಿಚಾರವನ್ನು ಹರೀಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹರೀಶ್-ಶ್ರುತಿ ದಂಪತಿ 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಈಗ ಎರಡನೇ ಬಾರಿ ಹೆಣ್ಣು ಮಗುವಿಗೆ ತಂದೆಯಾಗಿರುವುದು ನನ್ನ ಅದೃಷ್ಟ ಎಂದು ಹರೀಶ್ ಬರೆದುಕೊಂಡಿದ್ದಾರೆ.