ಬೆಂಗಳೂರು: ಕೇಂದ್ರ ಸರ್ಕಾರ ಒಂದೇ ದೇಶ ಒಂದೇ ತೆರಿಗೆ ಎಂಬ ನಿಯಮ ತಂದಿರುವುದು ಸಿನಿಮಾ ನಟರುಗಳ ಜೇಬಿಗೆ ಕತ್ತರಿ ಹಾಕಿದಂತಾಗುತ್ತದೆ. ಜಿಎಸ್ ಟಿ ತೆರಿಗೆ ಜಾರಿಯಿಂದ ಸ್ಯಾಂಡಲ್ ವುಡ್ ನಟರಿಗೆ ಭಾರೀ ನಷ್ಟವಾಗಲಿದೆ.
ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಯಶ್ ಸೇರಿದಂತೆ ಸ್ಯಾಂಡಲ್ ವುಡ್ ನ ಬಿಗ್ ನಟರೆಲ್ಲಾ ದೊಡ್ಡ ಮೊತ್ತದ ಸಂಭಾವನೆ ಪಡೆಯುವವರೇ. ಇವರೆಲ್ಲಾ ಈಗ ಜುಲೈ 1 ರಿಂದ ತಮ್ಮ ಸಂಭಾವನೆಯ ಕಾಲು ಭಾಗದಷ್ಟು ತೆರಿಗೆ ರೂಪದಲ್ಲಿ ನೀಡಬೇಕಾಗುತ್ತದೆ.
ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯುವವರೆಲ್ಲಾ ಜಿಎಸ್ ಟಿ ತೆರಿಗೆ ನಿಯಮದಡಿಗೆ ಬರಬೇಕಾಗುತ್ತದೆ. ಅದರಂತೆ ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳೆಲ್ಲಾ 5 ರಿಂದ 6 ಕೋಟಿ ಸಂಭಾವನೆ ಪಡೆಯುತ್ತಾರೆ. ಹೀಗಾಗಿ ಈ ನಟರುಗಳೆಲ್ಲಾ ತೆರಿಗೆ ರೂಪದಲ್ಲಿ ಸುಮಾರು 1.58 ಕೋಟಿ ರೂ. ತೆರಬೇಕಾಗುತ್ತದೆ.
20 ಲಕ್ಷ ರೂ. ಗೆ ಶೇ. 28 ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಹಾಗಾಗಿ 20 ಲಕ್ಷ ಸಂಭಾವನೆ ಪಡೆಯುವ ಒಬ್ಬ ನಟ 5.60 ಲಕ್ಷ ರೂ. ತೆರಿಗೆ ಕಟ್ಟಬೇಕು. ಹೀಗಾಗಿ ಈ ನಿಯಮ ಸ್ಯಾಂಡಲ್ ವುಡ್ ನಟರ ಜೇಬಿಗೆ ಕತ್ತರಿ ಹಾಕುವುದಂತೂ ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ