ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ ಸಿನಿಮಾದಲ್ಲಿ ಕುತ್ತಿಗೆಗೆ ಹಾಕಿಕೊಂಡಿದ್ದ ಸರ ಒಂದು ಕಾಲದಲ್ಲಿ ಟ್ರೆಂಡ್ ಆಗಿತ್ತು. ಆ ಸರ ಮತ್ತೆ ಗಣೇಶ್ ಕುತ್ತಿಗೆಗೇರಿದೆ.
ಬ್ಲೇಡ್ ಲಾಕೆಟ್ ಇರುವ ಚೈನ್ ಒಂದು ಕಾಲದಲ್ಲಿ ಹುಡುಗರ ಫೇವರಿಟ್ ಆಗಿತ್ತು. ಗಾಳಿಪಟ, ಮುಂಗಾರು ಮಳೆಯಲ್ಲಿ ಗಣೇಶ್ ಇಂತಹದ್ದೇ ಲಾಕೆಟ್ ಇರುವ ಚೈನ್ ಧರಿಸಿದ್ದರು.
ಇದೀಗ ಗಾಳಿಪಟ 2 ನಲ್ಲೂ ಗಣೇಶ್ ಅಂತಹದ್ದೇ ಲಾಕೆಟ್ ಇರುವ ಚೈನ್ ಧರಿಸುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಗಣೇಶ್ ಕುತ್ತಿಗೆಯಲ್ಲಿರುವ ಸರ ಮತ್ತೆ ಗಮನ ಸೆಳೆಯುತ್ತಿದೆ.