ಸಿನಿಮಾ ರಂಗದಲ್ಲಿ ನಟ, ನಟಿಯರಾಗಿ, ನಿರ್ದೇಶಕರಾಗಿ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಿಂಚಬೇಕೆಂಬುದು ಅದೆಷ್ಟೋ ಜನರ ಕನಸು. ಆದರೆ ಸರಿಯಾದ ತರಬೇತಿ ಮಾರ್ಗಗಳಿಲ್ಲದೇ ಅಂಥವರಲ್ಲಿ ಹೆಚ್ಚಿನವರು ಪ್ರತಿಭೆ ಇದ್ದರೂ ನಿರಾಸೆಗೀಡಾಗುವಂಥಾ ವಾತಾವರಣವಿದೆ. ಇದನ್ನು ನೀಗಿಸಿ ಹೊಸಾ ಪ್ರತಿಭೆಗಳನ್ನು ಎಲ್ಲ ರೀತಿಯಲ್ಲಿಯೂ ಅಣಿಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಖ್ಯಾತ ನಿರ್ದೇಶಕ ಗುರು ದೇಶಪಾಂಡೆ ಜಿ ಅಕಾಡೆಮಿ ಎಂಬ ಸಿನಿಮಾ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದಾರೆ.
ಇಲ್ಲಿ ಅವರವರ ಆಸಕ್ತಿಗನುಗುಣವಾಗಿ ಎಲ್ಲ ವಿಭಾಗಗಳಲ್ಲಿಯೂ ತರಬೇತಿ ಕೊಡುವ ವ್ಯವಸ್ಥೆಯನ್ನು ಗುರು ದೇಶಪಾಂಡೆ ಕಲ್ಪಿಸಿದ್ದಾರೆ. ಯಾವ ವಿಭಾಗದಲ್ಲಿಯೇ ಆಸಕ್ತಿ ಹೊಂದಿರುವವರಾದರೂ ನಿಜವಾದ ಸಿನಿಮಾ ಜಗತ್ತನ್ನು, ಸಿನಿಮಾ ರೂಪಿಸುವ ಪಟ್ಟುಗಳನ್ನು ಆಸಕ್ಗತರ ಮುಂದೆ ಅನಾವರಣಗೊಳಿಸಲಾಗುತ್ತದೆ. ಹೀಗೆ ನುರಿತವರಿಂದ ತರಬೇತಿ ಕೊಡಿಸಿ ಪ್ರತೀಬೆಗನುಗುಣವಾಗಿ ಎಲ್ಲರಿಗೂ ತಮ್ಮ ಸಂಸ್ಥೆಯ ಕಡೆಯಿಂದ ನಿರ್ಮಾಣಗೊಳ್ಳುವ ಚಿತ್ರಗಳಲ್ಲಿಯೇ ಅವಕಾಶ ಕಲ್ಪಿಸಲೂ ಗುರು ದೇಶಪಾಂಡೆ ತೀರ್ಮಾನಿಸಿದ್ದಾರೆ. ಇದರಿಂದಾಗಿ ತರಬೇತಿ ಪಡೆದ ನಂತರ ಅವಕಾಶಗಳಿಗಾಗಿ ಅರಸಿ ಸಮಯ ವ್ಯರ್ಥ ಮಾಡಿಕೊಳ್ಳೋದನ್ನೂ ತಪ್ಪಿಸುವ ನಿಟ್ಟಿನಲ್ಲಿಯೂ ಅವರು ಯೋಜನೆ ಸಿದ್ಧಪಡಿಸಿದ್ದಾರೆ.
ನಿರ್ಮಾಪಕರಾದ ಕೆ.ಮಂಜು, ಉದಯ್.ಕೆ ಮೆಹ್ತಾ, ನಿರ್ದೇಶಕರಾದ ದಯಾಳ್ ಪದ್ಮನಾಭನ್, ಭರ್ಜರಿ ಚೇತನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಬಿ.ಎಂ.ಗಿರಿರಾಜ್, ಮೌನೇಶ್ ಬಡಿಗೇರ್, ನವೀನ್ ಕೃಷ್ಣ, ಕೆಂಪರಾಜು, ಕೆ.ಎಸ್.ಚಂದ್ರಶೇಖರ್, ಆರ್.ಜೆ.ನೇತ್ರಾ, ಹೇಮಲತಾ, ಸಂತೋಷ್ ನಾಯಕ್, ಮದನ್-ಹರಿಣಿ, ಗಿರೀಶ್, ಡಿಫರೆಂಟ್ ಡ್ಯಾನಿ, ದೀಪಕ್ ಮತ್ತು ಶ್ರೀನಿವಾಸ್ ಸೇರಿದಂತೆ ಅನೇಕರು ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಲಿಚ್ಚಿಸುವವರು ಇದೇ ವತಿಂಗಳ 25ರೊಳಗಾಗಿ ಪ್ರವೇಶ ಪಡೆದುಕೊಳ್ಳಬಹುದು. ಅಂದಹಾಗೆ ಜಿ ಅಕಾಡೆಮಿ ಬೆಂಗಳೂರಿನ ನಾಗರಬಾವಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿಗಾಗಿ www.gacademy.co ವೆಬ್ಸೈಟಿಗೆ ಭೇಟಿ ನೀಡಬಹುದು.