ಮಂಡ್ಯ: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಾಜಕಾರಣಿಯಾದಾಗಿನಿಂದ ಒಂದಲ್ಲ ಒಂದು ವಿವಾದ ಮೈಮೇಲೆ ಎಳೆದುಕೊಳ್ಳುತ್ತಲೇ ಇರ್ತಾರೆ. ಈ ಬಾರಿ ತಮ್ಮ ಬಳಿ ಬಹುಮಾನ ಮೊತ್ತ ಕೇಳಿಕೊಂಡು ಬಂದ ವ್ಯಕ್ತಿಯೊಬ್ಬರಿಗೆ ಹಿಗ್ಗಾ ಮುಗ್ಗಾ ಬೈಯ್ದು ಸುದ್ದಿಯಾಗಿದ್ದಾರೆ.
ರಮ್ಯಾ ಸಂಸದೆಯಾಗಿದ್ದಾಗ ಮಂಡ್ಯ ಅಭಿವೃದ್ಧಿ ಬಗ್ಗೆ ಅತ್ಯುತ್ತಮವಾಗಿ ಯೋಜನೆ ರೂಪಸಿಕೊಂಡು ಬರುವವರಿಗೆ 2.5 ಲಕ್ಷ ರೂ. ಬಹುಮಾನ ಕೊಡುವುದಾಗಿ ಘೋಷಿಸಿದ್ದರು. ಅದರಂತೆ ಪಾಂಡವಪುರದ ಪಾಂಡುದೊರೈ ಎಂಬಾತ ತನ್ನ ಸ್ವಂತ ಹಣ ಖರ್ಚು ಮಾಡಿ, ವಿಡಿಯೋ, ಫೋಟೋ ಸಮೇತ ಜಿಲ್ಲೆಯ ಸಮಸ್ಯೆ ಮತ್ತು ಪರಿಹಾರಗಳ ಕುರಿತು ಪ್ರಾತ್ಯಕ್ಷಿಕೆ ತಯಾರು ಮಾಡಿದ್ದರು.
ಪಾಂಡುದೊರೈಯಂತೆ ನೂರಾರು ಮಂದಿ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ಆದರೆ ಚುನಾವಣೆಯಲ್ಲಿ ರಮ್ಯಾ ಸೋತರು. ಅಲ್ಲಿಗೆ ಅವರು ಘೋಷಿಸಿದ ಯೋಜನೆಗೂ ಜಿಲ್ಲಾಡಳಿತ ಕ್ಯಾರೇ ಎನ್ನಲಿಲ್ಲ. ಹೀಗಾಗಿ ಪಾಂಡುದೊರೈ ಬಹುಮಾನ ಹಣ ಕೇಳಲು ನೇರವಾಗಿ ರಮ್ಯಾ ಮನೆಗೇ ಬಂದಿದ್ದರು.
ಆಗ ಆತನ ಮೇಲೆ ಕೂಗಾಡಿದ ರಮ್ಯಾ ನಾನು ಸಂಸದೆ ಅಲ್ಲ, ಬಹುಮಾನ ಬೇಕಿದ್ದರೆ, ಕೇಂದ್ರ ಸರ್ಕಾರವನ್ನು ಕೇಳು. ನಿಮ್ಮ ಮೋದಿಯನ್ನು ಕೇಳು. ಇಲ್ಲಾ ಜಿಲ್ಲಾಧಿಕಾರಿಗೆ ಕೇಳು ಎಂದರು. ಕನಿಷ್ಠ ಯೋಜನೆ ಸಿದ್ಧಪಡಿಸಿದವರಿಗೆ ಕೃತಜ್ಞತೆಯನ್ನಾದರೂ ಹೇಳಿ ಎಂಬ ಪಾಂಡುದೊರೈ ಮನವಿಗೂ ಸ್ಪಂದಿಸಲಿಲ್ಲ. ಬದಲಾಗಿ ನೀನೊಬ್ಬ ರೌಡಿ ಎಂದು ಬಿಟ್ಟರು. ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿದ್ದ ಸಾರ್ವಜನಿಕರು ರಮ್ಯಾ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದಾರೆ. ಬೇಕಿತ್ತಾ ಇದೆಲ್ಲಾ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ