ಹೈದರಾಬಾದ್ : ತೆಲುಗು ನಟಿ ಮಾಲ್ವಿ ಮಲ್ಹೋತ್ರಾ ಅವರು ನಿರ್ಮಾಪಕನಿಂದ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ನಟಿ ಮಾಲ್ವಿ ಮಲ್ಹೋತ್ರಾ ಅವರು ತೆಲುಗು ಚಿತ್ರ ಕುಮಾರಿ 18 ಪ್ಲಸ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಕೆಲವು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ.
ಇವರು ಚಿತ್ರ ಅವಕಾಶಕ್ಕಾಗಿ ನಿರ್ಮಾಪಕ ಯೋಗೆಶ್ ಕುಮಾರ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ನಿರ್ಮಾಪಕ ಯೋಗೆಶ್ ಕುಮಾರ್ ಮದುವೆಯಾಗಲು ನಟಿಗೆ ಕಿರುಕುಳ ನೀಡಿದ್ದರಿಂದ ಅವರಿಂದ ದೂರವಾಗಿದ್ದಾರೆ. ಇದರಿಂದ ಕೋಪಗೊಂಡ ನಿರ್ಮಾಪಕ ನಟಿಗೆ ಚಾಕುವಿನಿಂದ 4 ಬಾರಿ ಇರಿದಿದ್ದಾರೆ. ಇದರಿಂದ ಗಾಯಗೊಂಡ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂಬುದಾಗಿ ತಿಳಿದುಬಂದಿದೆ.