Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಮಿಳು ನಟಿ ಸಾವಿನ ಹಿಂದೆ ಮಲಯಾಳಂ ನಟಿ ನಿಗೂಢ ಸಾವು

ತಮಿಳು ನಟಿ ಸಾವಿನ ಹಿಂದೆ ಮಲಯಾಳಂ ನಟಿ ನಿಗೂಢ ಸಾವು
ತ್ರಿಶೂರ್ , ಸೋಮವಾರ, 14 ನವೆಂಬರ್ 2016 (09:01 IST)
ಚೆನ್ನೈನಲ್ಲಿ ಕಿರುತೆರೆ ನಟಿ ಸುಪರ್ಣ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮಲಯಾಳಂ ತಾರೆ ರೇಖಾ ಮೋಹನ್ ತ್ರಿಶೂರ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಐಷಾರಾಮಿ ಶೋಭಾ ಸಿಟಿ ಕಾಂಪ್ಲೆಂಕ್ಸ್ ಅಪಾರ್ಟಮೆಂಟ್‌ನಲ್ಲಿ 45 ವರ್ಷದ ನಟಿ ರೇಖಾ ಶವವಾಗಿ ಪತ್ತೆಯಾಗಿದ್ದು ಹಲವು ಅುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 
 
ರೇಖಾ ಪತಿ ಉದ್ಯಮಿಯಾಗಿದ್ದು ಮಲೇಷ್ಯಾದಲ್ಲಿದ್ದಾರೆ. ಪತ್ನಿ ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದು ಆಕೆಯ ಸ್ನೇಹಿತರಿಗೆ ಅವರು ಫೋನ್ ಕರೆ ಮಾಡಿ ತಿಳಿಸಿದ್ದಾರೆ. ಹೀಗಾಗಿ ಶನಿವಾರ ರಾತ್ರಿ ಅವರನ್ನು ಭೇಟಿಯಾಗಲು ಬಂದ ಸ್ನೇಹಿತರು ಒಳಗಡೆಯಿಂದ ಬಾಗಿಲು ಹಾಕಿದ್ದು, ಎಷ್ಟು ಕರೆದರೂ ಪ್ರತಿಕ್ರಿಯಿಸುತ್ತಿಲ್ಲವೆಂದು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. 
 
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ನಂತರವಷ್ಟೇ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬುದು ತಿಳಿದು ಬರಲಿದೆ. 
 
'ಮಾಯಮ್ಮ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ಮನೆಮಾತಾಗಿದ್ದರು. 
 
ತಮಿಳು ಚಲನಚಿತ್ರ ಮತ್ತು ಕಿರುತೆರೆ ನಟಿ ಸುಪರ್ಣಾ ಆನಂದ್ (29) ಕಳೆದ ಮೂರು ದಿನಗಳ ಹಿಂದೆ ಚೆನ್ನೈನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ  ಶವವಾಗಿ ಪತ್ತೆಯಾಗಿದ್ದಾರೆ.
 
ಕಳೆದ ಮೂರು ದಿನಗಳಿಂದ ಅವರ ಮನೆ ಲಾಕ್ ಆಗಿತ್ತು. ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಶುಕ್ರವಾರ ಅವರ ಮನೆಗೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಒಳ ಹೋದಾಗ ಸುಪರ್ಣಾ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂತು. 
 
ಕಿರುತೆರೆ ನಿರೂಪಕಿಯಾಗಿ ವೃತ್ತಿಜೀವನವನ್ನು ಆರಂಭಿಸಿದ್ದ ಸುಪರ್ಣಾ ಹಲವು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಳು. ಅಷ್ಟೇ ಅಲ್ಲದೆ ಕೆಲ ಸಿನಿಮಾಗಳಲ್ಲಿ ಸಹ ಕಾಣಿಸಿಕೊಂಡಿದ್ದಳು.
 
ಇದೇ ವರ್ಷದ ಆರಂಭದಲ್ಲಿ ಕಿರುತೆರೆ ನಟ ಸಾಯಿ ಪ್ರಶಾಂತ್ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೌಟುಂಬಿಕ ಕಲಹವೇ ಆತನ ಸಾವಿಗೆ ಕಾರಣ ಎಂದು ಬಗೆಯಲಾಗಿತ್ತು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ರನ್ನು ಅಕ್ಷಯ್ ಕುಮಾರ್ ಎಂದು ತಪ್ಪಾಗಿ ತಿಳಿದಿದ್ದ ಅಭಿಮಾನಿ!