ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಎಂದರೆ ಅದೆಷ್ಟೂ ಹುಚ್ಚು ಆರಾಧಕರಿದ್ದಾರೆ. ಅಂತಹದ್ದೇ ಅಂಧಾಭಿಮಾನಿಗಳು ಮಾಡಿದ ಕೆಲಸ ಈಗ ವಿವಾದಕ್ಕೆ ಕಾರಣವಾಗಿದೆ.
ರಜನಿ ಅಭಿನಯದ ಅನ್ನಾಥೆ ಸಿನಿಮಾದ ಫಸ್ಟ್ ಲುಕ್ ಲಾಂಚ್ ಆಗಿದೆ. ಇದರ ಸಂಭ್ರಮಾಚರಣೆಯನ್ನು ಕೆಲವು ಅಭಿಮಾನಿಗಳ ಗುಂಪು ಮೇಕೆ ಕಡಿದು ಆಚರಿಸಿಕೊಂಡಿದೆ. ಇಂತಹ ಸಂಭ್ರಮಾಚರಣೆ ನೆಪದಲ್ಲಿ ಪ್ರಾಣಿಗಳನ್ನು ಬಲಿಕೊಡುವುದು ತಪ್ಪು.
ಆದರೆ ಕೆಲವು ಅಂಧಾಭಿಮಾನಿಗಳು ಮಾಡಿದ ಕೆಲಸ ಈಗ ವಿವಾದಕ್ಕೆ ಕಾರಣವಾಗಿದೆ. ರಜನಿಕಾಂತ್ ಫ್ಯಾನ್ ಕ್ಲಬ್ ಈ ಬಗ್ಗೆ ಅಸಮಾಧನ ಹೊರಹಾಕಿದೆ. ಇದು ರಜನಿ ಮೇಲಿನ ಪ್ರೀತಿಯಲ್ಲ, ಅವರಿಗೆ ಮಾಡಿದ ಅವಮಾನ ಎಂದು ಘಟನೆಯನ್ನು ಖಂಡಿಸಿದೆ.