ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ವ್ಯಾಲೆಂಟೈನ್ಸ್ ಡೇ ದಿನ ಹೊರಬೀಳಲಿದೆ.
ಫೆಬ್ರವರಿ 14 ರಂದು ಏಕ್ ಲವ್ ಯಾದ ಮೊದಲ ಹಾಡನ್ನು ಬಿಡುಗಡೆ ಮಾಡಲು ಪ್ರೇಮ್ ನಿರ್ಧರಿಸಿದ್ದಾರೆ. ಹಾಡಿನ ಜೊತೆಗೆ ಮೇಕಿಂಗ್ ವಿಡಿಯೋವನ್ನೂ ಲಾಂಚ್ ಮಾಡಲಿದ್ದಾರೆ. ರಕ್ಷಿತಾ ಪ್ರೇಮ್ ನಿರ್ಮಾಣದ ಏಕ್ ಲವ್ ಯಾ ಸಿನಿಮಾದಲ್ಲಿ ಅವರ ಸಹೋದರ ರಾಣಾ ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಂ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.