ಬೆಂಗಳೂರು: ಲಾಕ್ ಡೌನ್, ಕೊರೋನಾದಿಂದಾಗಿ ತತ್ತರಿಸಿ ಹೋಗಿದ್ದ ಚಿತ್ರರಂಗಕ್ಕೆ ಈಗ ಡ್ರಗ್ ಮಾಫಿಯಾ ಬರಸಿಡಿಲಿನಂತೆ ಬಂದೆರಗಿದೆ.
ಡ್ರಗ್ ಮಾಫಿಯಾ ಮುಂಬರುವ ಚಿತ್ರಗಳ ಮೇಲೆ ಪರಿಣಾಮ ಬೀರುತ್ತಾ? ಇದು ಆರೋಪಿಗಳಾಗಿರುವವರಿಗೆ ಮಾತ್ರ ಸೀಮಿತವಾ?
ಈಗಾಗಲೇ ಸಿಸಿಬಿಯಿಂದ ಬಂಧಿತರಾಗಿರುವ ರಾಗಿಣಿ ಕೆಲವು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾ ಚಿತ್ರೀಕರಣಕ್ಕೆ ಅವರ ಸದ್ಯದ ಪರಿಸ್ಥಿತಿ ಅಡ್ಡಿಯಾಗಲಿದೆ. ಅಲ್ಲದೆ, ಅಭಿಮಾನಿಗಳು ಮುಂದೆ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೂ ನಿರ್ಮಾಪಕರಿಗೆ ತಲೆನೋವಾಗಲಿದೆ. ಇದಲ್ಲದೆ, ಇನ್ನೂ ಮತ್ತಷ್ಟು ನಟ-ನಟಿಯರು ಸಿಸಿಬಿ ಖೆಡ್ಡಾಕ್ಕೆ ಬಿದ್ದರೂ ಅಚ್ಚರಿಯಿಲ್ಲ. ಹಾಗಿರುವಾಗ ಆ ನಟ-ನಟಿಯರ ಚಿತ್ರೀಕರಣಕ್ಕೆ ತೊಂದರೆಯಾಗೋದು ಖಂಡಿತಾ. ಹಾಗಾಗಿ ಈಗಾಗಲೇ ಬಂಧಿತರಾಗಿರುವವರು ಯಾರ ಹೆಸರು ಬಾಯ್ಬಿಡುತ್ತಾರೋ, ಯಾವ ಕಲಾವಿದರಿಗೆ ಯಾವಾಗ ಸಿಸಿಬಿಯಿಂದ ಕರೆಬರುತ್ತದೋ, ಒಮ್ಮೆ ವಿಚಾರಣೆಯಾದ ಮೇಲೆ ಅವರನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬಿತ್ಯಾದಿ ವಿಚಾರಗಳು ಸಿನಿಮಾ ರಂಗದ ಮೇಲೆ ಪ್ರಭಾವ ಬೀರಬಹುದು.