ಸ್ಯಾಂಡಲ್ ವುಡ್ ನಲ್ಲಿನ ಕೆಲವು ಯುವ ನಟ, ನಟಿಯರಿಗೆ ಡ್ರಗ್ ಪೂರೈಕೆಯಾಗುತ್ತಿದೆ ಎಂಬ ಸುದ್ದಿ ಚರ್ಚೆಯಾಗುತ್ತಿರುವ ನಡುವೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಈಗಾಗಲೇ ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ತಮಗಿರುವ ಮಾಹಿತಿ ಹಂಚಿಕೊಂಡಿರುವ ಇಂದ್ರಜಿತ್ ಲಂಕೇಶ್, ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ಸಿಸಿಬಿ ಪೊಲೀಸರ ಮುಂದೆ 10 – 15 ನಟ, ನಟಿಯರ ಹೆಸರನ್ನು ಹೇಳಲಾಗಿದೆ ಎನ್ನಲಾಗುತ್ತಿದ್ದು, ಎರಡನೇ ಸಲದ ವಿಚಾರಣೆಯಲ್ಲಿ ತಮ್ಮಲ್ಲಿರುವ ದಾಖಲೆಗಳನ್ನು ಸಿಸಿಬಿ ಅಧಿಕಾರಿಗಳಿಗೆ ಇಂದ್ರಜಿತ್ ಲಂಕೇಶ್ ನೀಡಲಿದ್ದಾರೆ ಎನ್ನಲಾಗುತ್ತಿದೆ.