ಸ್ಯಾಂಡಲ್ ವುಡ್ ನ ಕೆಲವರಿಗೆ ಡ್ರಗ್ ಲಿಂಕ್ ಇರೋ ಬಗ್ಗೆ ಪರ ವಿರೋಧ ಚರ್ಚೆ ಆಗ್ತಾ ಇದೆ.
ಈ ನಡುವೆ ನಟ ಚೇತನ್ ಟ್ವಿಟ್ ಮಾಡಿ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಿದ್ದಾರೆ.
ಮಾದಕ ವಸ್ತುವಿನ ಜಾಗೃತಿ ಅಭಿಯಾನ, ಪುನರ್ವಸತಿ ಕಾರ್ಯಕ್ರಮಗಳು, ಸರಕಾರದ ಉತ್ತಮ ನೀತಿಗಳು ಮತ್ತು ಸರಿಯಾದ ತನಿಖೆಗಳು ಆಗಬೇಕಿದೆ ಎಂದಿದ್ದಾರೆ.
ಇನ್ನು, ಮಸಿ ಬಳಿಯುವುದು, ಉದ್ರೇಕಕಾರಿ ಹೇಳಿಕೆಗಳು ಬೇಡವೇ ಬೇಡ ಅಂತ ನಟ ಚೇತನ್ ಹೇಳಿದ್ದಾರೆ.
ಇದೆ ವೇಳೆ, ನಮ್ಮೊಂದಿಗೆ ಇಲ್ಲದ ವ್ಯಕ್ತಿಯ ಹೆಸರಿನ ಮೇಲೆ ಕೆಸರು ಎರಚುವ ಕೆಲಸ ಆಗಬಾರದು ಎಂದೂ ಹೇಳಿದ್ದಾರೆ.