ಹೈದರಾಬಾದ್ : ಖ್ಯಾತ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದ ಟಾಲಿವುಡ್ ನ ಸ್ಟಾರ್ ನಟರಾದ ಜೂನಿಯರ್ ಎನ್ ಟಿಆರ್ ಮತ್ತು ರಾಮ ಚರಣ್ ಅಭಿನಯದ ಆರ್.ಆರ್.ಆರ್ ಸಿನಿಮಾವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಘೋಷಿಸಿದ ಕ್ಷಣ ಅಮೇರಿಕಕ್ಕೆ ಬಿಡುಗಡೆಯ ಹಕ್ಕನ್ನು ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ. ತೆಲುಗು-ತಮಿಳು ಆವೃತ್ತಿಗಳ ವಿದೇಶಿ ಹಕ್ಕುಗಳನ್ನು ಪೋರ್ಸ್ ಫಿಲ್ಮ್ಸ್ ಗೆ 68ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಅಮೇರಿಕಾದಲ್ಲಿ ಕೊರೊನಾ 2ನೇ ಅಲೆಯು ಹೆಚ್ಚು ಕಾಲ ಉಳಿಯುವುದಿಲ್ಲ. ಅಕ್ಟೋಬರ್ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಅದಕ್ಕಾಗಿಯೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲು ರಾಜಮೌಳಿ ಧೈರ್ಯ ಮಾಡಿದ್ದಾರೆ ಎನ್ನಲಾಗಿದೆ.