ಬೆಂಗಳೂರು : ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಮೊದಲನೇ ಬಾರಿ ಮಾಧ್ಯಮ ಹಾಗೂ ಸಿನಿಮಂದಿ ಜೊತೆ ನಡೆದಿತ್ತು. ಆದರೆ ಈ ಬಾರಿ ಇದರಲ್ಲಿ ಇಂಟರ್ ನ್ಯಾಷನಲ್ ಆಟಗಾರರು ಕೂಡ ಭಾಗಿಯಾಗಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಹಾಗೇ ಈ ಸೆಲೆಬ್ರಿಟಿಗಳು ಯಾರ ಪರ ಆಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಇಂಟರ್ ನ್ಯಾಷನಲ್ ಆಟಗಾರರಾದ ವಿರೇಂದ್ರ ಸೆಹ್ವಾಗ್ ಕದಂಬ ಲಯನ್ಸ್ ನಲ್ಲಿ ಆಟವಾಡಿದ್ರೆ, ಹರ್ಷೆಲ್ ಗಿಬ್ಸ್ ಹೊಯ್ಸಳ ಈಗಲ್ಸ್ ತಂಡದಲ್ಲಿರ್ತಾರೆ. ತಿಲಕರತ್ನೆ ದಿಲ್ಸ್ಯಾನ್ ಒಡೆಯರ್ ಚಾರ್ಜರ್ಸ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಗಂಗಾ ವಾರಿಯರ್ಸ್ ನಲ್ಲಿದ್ದಾರೆ. ಇನ್ನು ಓವೈ ಷಾ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಆಯಡಂ ಗಿಲ್ಕ್ರಿಸ್ಟ್ ವಿಜಯನಗರ ಪೇಟ್ರಿಯಟ್ಸ್ ತಂಡದಲ್ಲಿದ್ದಾರೆ.
ಇನ್ನು ಸಿನಿಮಾ ನಟರಾದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ವಿಜಯನಗರ ಪೇಟ್ರಿಯಟ್ಸ್, ಪುನೀತ್ ರಾಜಕುಮಾರ್ ಗಂಗಾ ವಾರಿಯರ್ಸ್, ಸುದೀಪ್ ಕದಂಬ ಲಯನ್ಸ್, ಯಶ್ ರಾಷ್ಟ್ರಕೂಟ ಪ್ಯಾಂಥರ್ಸ್, ಉಪೇಂದ್ರ ಹೊಯ್ಸಳ ಈಗಲ್ಸ್, ಹಾಗೂ ಗಣೇಶ್ ಒಡೆಯರ್ ಚಾರ್ಜರ್ಸ್ ತಂಡದಲ್ಲಿದ್ದಾರೆ.
ಈ ಬಾರಿಯ ಕೆಸಿಸಿ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಅಂಬರೀಶ್, ಜನಾರ್ಧನ ರೆಡ್ಡಿ, ಸುಮಲತಾ, ಶಿವರಾಜ್ಕುಮಾರ್, ಉಪೇಂದ್ರ, ಗಣೇಶ್, ರಾಕ್ಲೈನ್ ವೆಂಕಟೇಶ್, ಶೃತಿ ಹಾಸನ್ ಮತ್ತು ಮಾನ್ವಿತಾ ಹಾಜರಿದ್ದರು. ಕೆಸಿಸಿ ಟೂರ್ನಮೆಂಟ್ ಸೆಪ್ಟೆಂಬರ್ 8 ಮತ್ತು 9ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ