ಹೈದರಾಬಾದ್ : ಆಗಸ್ಟ್ 8ರಂದು ತೆಲುಗು ನಟ ರಾಣಾ ದಗ್ಗುಬಾಟಿ ತಮ್ಮ ಗೆಳತಿ ಮಿಹಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ವೇಳೆ ಮಿಹಿಕಾ ಅವರು ತೊಟ್ಟ ಲೆಹೆಂಗಾದ ಬೆಲೆ ಕೇಳಿದರೆ ಶಾಕ್ ಆಗ್ತೀರಾ.
ಹೌದು. ಕೊರೊನಾ ಭೀತಿ ಹಿನ್ನಲೆಯಲ್ಲಿ ನಟ ರಾಣಾ ದಗ್ಗುಬಾಟಿ ಮದುವೆ ಸರಳವಾಗಿ ನಡೆಸಲಾಗಿತ್ತು. ಕುಟುಂಬಸ್ಥರು, ಕೆಲವೇ ಕೆಲವು ಆಪ್ತರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಆದರೆ ಮದುವೆ ಸರಳವಾಗಿ ನಡೆದರೂ ಕೂಡ ಮಿಹಿಕಾ ಅವರು ಮದುವೆಗೆ ಬರೋಬರಿ 6ಲಕ್ಷದ ಲೆಹೆಂಗಾವನ್ನು ತೊಟ್ಟಿದ್ದರಂತೆ.
ಖ್ಯಾತ ವಸ್ತ್ರ ವಿನ್ಯಾಸಕಿ ಅನಾಮಿಕಾ ಖನ್ನಾ ಈ ಲೆಹೆಂಗಾದ ವಿನ್ಯಾಸ ಮಾಡಿದ್ದಾರಂತೆ.