ಚೆನ್ನೈ : ಕಮಲ್ ಹಾಸನ್ ಅಭಿನಯದ ಮುಂಬರುವ ಬಿಗ್ ಬಜೆಟ್ ಚಿತ್ರ ಇಂಡಿಯನ್ 2 ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಲು ನಿರ್ದೇಶಕ ಶಂಕರ್ ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇತ್ತೀಚೆಗೆ ಇಂಡಿಯನ್ 2 ಚಿತ್ರವನ್ನು ನಿರ್ಮಿಸುತ್ತಿರುವ ಪ್ರೊಡಕ್ಷನ್ ಹೌಸ್ ಲೈಕಾ ನಿರ್ದೇಶಕ ಶಂಕರ್ ಇಂಡಿಯಾ 2 ಚಿತ್ರವನ್ನು ಕಮಪ್ಲೀಟ್ ಮಾಡದೆ ಮುಂದಿನ ಚಿತ್ರಕ್ಕೆ ಹೋಗಬಾರದೆಂದು ತಡೆಯೊಡ್ಡಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು.
ಇದರಿಂದ ಬೇಸತ್ತ ಶಂಕರ್ ಅವರು ಇಂಡಿಯನ್ 2 ಚತ್ರವನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಅದಕ್ಕಾಗಿ ವಿದೇಶಿ ತಂತ್ರಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಜೂನ್ 2ರಿಂದ ಇಂಡಿಯನ್ 2 ಚಿತ್ರೀಕರಣ ಪುನಾರರಂಭಗೊಳ್ಳಲಿದೆ ಎನ್ನಲಾಗಿದೆ.