ಬೆಂಗಳೂರು: ನಿರ್ದೇಶಕ ಜೋಗಿ ಪ್ರೇಮ್ ಮಾತೃ ವಿಯೋಗದ ದುಃಖದಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೇಮ್ ತಾಯಿ ಭಾಗ್ಯಮ್ಮ ನಿನ್ನೆ ನಿಧನರಾಗಿದ್ದಾರೆ.
ಭಾಗ್ಯಮ್ಮ ಲ್ಯುಕೋಮಿಯಾ (ರಕ್ತದ ಕ್ಯಾನ್ಸರ್) ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ರಕ್ಷಿತಾ ಪ್ರೇಮ್ ಈ ವಿಚಾರವನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ.
ಸಿನಿಮಾಗಳಲ್ಲಿ ತಾಯಿ ಪ್ರೇಮದ ಬಗ್ಗೆ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಪ್ರೇಮ್ ಈಗ ಸ್ವತಃ ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.