ಬೆಂಗಳೂರು: ಅತ್ತಿಗೆ ಮೇಘನಾ ಸರ್ಜಾ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಧ್ರುವ ಸರ್ಜಾ ಅಣ್ಣ ಚಿರು ಸರ್ಜಾ ಫೋಟೋ ನೋಡಿ ಕಣ್ಣೀರಿಟ್ಟ ಘಟನೆ ನಡೆದಿದೆ.
ಸೀಮಂತ ಕಾರ್ಯಕ್ರಮದಲ್ಲಿ ಚಿರು ಸರ್ಜಾ ಫೋಟೋ ಬಳಿ ಕುಟುಂಬಸ್ಥರು ನಿಂತುಕೊಂಡು ಫೋಟೋ ತೆಗೆಸಿಕೊಳ್ಳುವವೇಳೆ ಅಣ್ಣನ ಫೋಟೋ ನೋಡಿದ ಧ್ರುವ ಭಾವುಕರಾಗಿ ಕಣ್ಣೀರು ಹಾಕಿದರು. ಅತ್ತಿಗೆ ಮೇಘನಾಗೆ ಅಕ್ಷತೆ ಹಾಕುವಾಗಲೂ ಭಾವುಕರಾದ ಧ್ರುವ ಆಕೆಯನ್ನು ತಬ್ಬಿ ಸಂತೈಸಿದರು. ಸೀಮಂತ ಕಾರ್ಯಕ್ರಮದಲ್ಲೂ ಕುಟುಂಬಸ್ಥರು ಚಿರು ಸರ್ಜಾ ಸಾವಿನ ನೋವಿನಲ್ಲೇ ಇದ್ದಿದ್ದು ಕಂಡು ಬಂತು.