ಕೋಲಿವುಡ್ ನಟ, ರಜನಿಕಾಂತ್ ಅಳಿಮಯ್ಯ ಧನುಷ್ ಮದ್ರಾಸ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೆಲವು ದಿನಗಳ ಹಿಂದೆ ಚೆನ್ನೈ ಮೂಲದ ಕದಿರೇಶನ್, ಮೀನಾಕ್ಷಿ ದಂಪತಿಗಳು ಧನುಷ್ ತಮ್ಮ ಪುತ್ರನೆಂದು ಅವರನ್ನು ತಮ್ಮ ಸುಪರ್ದಿಗೆ ವಹಿಸಬೇಕೆಂದು ಕೋರ್ಟ್‌ನಲ್ಲಿ ಧಾವಾ ಹೂಡಿದ್ದರು.
ಈ ವಿಷಯದಲ್ಲಿ ಎಳ್ಳಷ್ಟೂ ನಿಜವಿಲ್ಲವೆಂದು, ಆ ಅರ್ಜಿಯನ್ನು ವಜಾ ಮಾಡಬೇಕೆಂದು ಧನುಷ್ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ದಂಪತಿಗಳು ಸಲ್ಲಿಸಿರುವ ಅರ್ಜಿಯಲ್ಲಿ ಧನುಷ್ ತಮಗೆ ಪ್ರತಿ ತಿಂಗಳು ರೂ.65,000 ನಿರ್ವಹಣೆ ವೆಚ್ಚ ಕೊಡಬೇಕೆಂದು ಕೋರಿದ್ದರು.
ಧನುಷ್ ಬಗ್ಗೆ ಸರಿಯಾದ ಮಾಹಿತಿಯನ್ನು ಕೋರ್ಟ್‌ಗೆ ತೋರಿಸದ ಕದಿರೇಶನ್, ಮೀನಾಕ್ಷಿ ಅರ್ಜಿ ಸಲ್ಲಿಸಿದ್ದಾರೆ. ಸೂಕ್ತ ಆಧಾರಗಳಿಲ್ಲದೆ ಧನುಷ್ ಪ್ರಕರಣವನ್ನು ವಾದಿಸಲು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು, ಅವರು ಹಾಕಿರುವ ಕೇಸನ್ನು ವಜಾಗೊಳಿಸಬೇಕೆಂದು ಧನುಷ್ ಪರ ವಕೀಲರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಚಾಲಲಿಂಗಂ ಅವರು ಕದಿರೇಶನ್ ದಂಪತಿಗಳಿಗೆ ನೋಟೀಸ್ ಜಾರಿ ಮಾಡಿ ಪ್ರಕರಣವನ್ನು ಫೆ.8ಕ್ಕೆ ಮುಂದೂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.