ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಕಾರ್ಯಕ್ರಮಗಳು ಅರಮನೆ ಮೈದಾನದಲ್ಲಿ ನಾಳೆಯಿಂದ ಪ್ರಾರಂಭವಾಗಲಿದೆ. ಈ ಮದುವೆಗೆ ಬಂದವರು ಹೊಟ್ಟೆ ಸವರಿಕೊಂಡು ಹೋಗುವ ಹಾಗೆ ಅಡುಗೆ ಮಾಡಿಸುತ್ತಿದ್ದಾರೆ ಯಶ್-ರಾಧಿಕಾ.
ಸುಮಾರು 25 ಸಾವಿರ ಜನಕ್ಕೆ ವಿವಾಹ ಭೋಜನದ ಏರ್ಪಾಡುಗಳು ನಡೆಯುತ್ತಿದೆ. ಅಭಿಮಾನಿಗಳಿಗಾಗಿ ನಡೆಯುವ ರಿಸೆಪ್ಷನ್ ಕಾರ್ಯಕ್ರಮಕ್ಕೆ 20 ಬಗೆಯ ವೆರೈಟಿ ಐಟಂಗಳನ್ನು ಮಾಡಿಸುತ್ತಿದ್ದಾರೆ. ಸಂಪೂರ್ಣ ದೇಸೀ ಸ್ಟೈಲ್ ಊಟ. ಉದಯ್ ಕ್ಯಾಟರರ್ಸ್ ನ 600 ಮಂದಿ ಬಾಣಸಿಗರು ಅಡುಗೆ ಸಿದ್ಧಗೊಳಿಸುತ್ತಿದ್ದಾರೆ. ಇದರಲ್ಲಿ ಮೂರು ಬಗೆ ಪಲ್ಯ, ಹೋಳಿಗೆ, ಜಿಲೇಬಿ, ಪಾಯಸ ಮುಂತಾದ ನೀರೂರಿಸುವ ಭಕ್ಷ್ಯಗಳು ಸೇರಿವೆ.
ಚಿತ್ರರಂಗದ ಗಣ್ಯರು ಮತ್ತು ಇತರ ಗಣ್ಯರಿಗಾಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನ ಚೆಫ್ ಗಳು ಭೋಜನ ಸಿದ್ಧಪಡಿಸಲಿದ್ದಾರೆ. ವಿಐಪಿ ಮತ್ತು ಅಭಿಮಾನಿಗಳಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಹಾಗೂ ಇನ್ನಿತರ ಕೆಲಸಗಳನ್ನು ಕಲಾ ನಿರ್ದೇಶಕ ಅರುಣ್ ಸಾಗರ್ ಮತ್ತು ಯಶ್ ಸ್ನೇಹಿತರು ಖುದ್ದು ಮಾಡುತ್ತಿದ್ದಾರೆ.
ನಿನ್ನೆನಡೆದ ಸಂಗೀತ್ ಕಾರ್ಯಕ್ರಮವೂ ಭರ್ಜರಿಯಾಗಿ ನಡೆದಿತ್ತು. ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್ ದಂಪತಿ, ಸುಧಾರಾಣಿ, ಪ್ರಿಯಾಂಕ ಉಪೇಂದ್ರ ಮುಂತಾದವರು ಭಾಗವಹಿಸಿದ್ದರು. ರಾಧಿಕಾ ಮೆಹಂದಿ ಕಾರ್ಯಕ್ರಮದಲ್ಲಿ ಹಳದಿ ಸೀರೆಯುಟ್ಟು ಮಿಂಚಿದ್ದರು. ನಂತರ ಸಂಗೀತ್ ಕಾರ್ಯಕ್ರಮದಲ್ಲಿ ಯಶ್ ಜತೆಗೆ ಕುಣಿದು ಕುಪ್ಪಳಿಸಿದರು. ಅಂತೂ ಭರ್ಜರಿ ಮದುವೆ ತಯಾರಿ ಜೋರಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ