ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ರೈತರ ಪರ ಕಾಳಜಿ ಹೊಂದಿದ್ದಾರೆ. ಇದೀಗ ಅವರ ಪತ್ನಿ ವಿಜಯಲಕ್ಷ್ಮೀ ರೈತರಿಗೆ ನೆರವಾಗುವ ಉದ್ದೇಶದಿಂದ ಹೊಸ ಉದ್ಯಮ ಶುರುಮಾಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೈ ಫ್ರೆಶ್ ಬಾಸ್ಕೆಟ್ ಎನ್ನುವ ಆನ್ ಲೈನ್ ಉದ್ಯಮ ಆರಂಭಿಸಿದ್ದು, ಇಲ್ಲಿ ರೈತರು ಬೆಳೆದ ತರಕಾರಿಗಳು ನೇರವಾಗಿ ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಇದೀಗ ಕೇವಲ ಬೆಂಗಳೂರಿನಲ್ಲಷ್ಟೇ ಆನ್ ಲೈನ್ ಮೂಲಕ ಆರ್ಡರ್ ಮಾಡಿ ತರಕಾರಿ ಖರೀದಿಸಬಹುದಾಗಿದ್ದು, ಮುಂದೆ ರಾಜ್ಯಾದ್ಯಂತ ಈ ಉದ್ಯಮ ವಿಸ್ತರಿಸುವ ಯೋಚನೆ ವಿಜಯಲಕ್ಷ್ಮಿ ಅವರಿಗಿದೆಯಂತೆ. ಅಂತೂ ಡಿ ಬಾಸ್ ಪತ್ನಿ ತಮ್ಮದೇ ಹೊಸ ಉದ್ಯಮದ ಮೂಲಕ ರೈತರಿಗೆ ನೆರವಾಗಲು ಹೊರಟಿದ್ದಾರೆ.