ಬೆಂಗಳೂರು: ಸ್ಯಾಂಡಲ್ ವುಡ್ ರಿಯಲ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿಗೆ ಇಂದು ಮದುವೆ ವಾರ್ಷಿಕೋತ್ಸವದ ಸಂಭ್ರಮ. ಇದರ ಜೊತೆಗೆ ಈ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಖುಷಿ ನೀಡಿದೆ.
ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಈ ಜೋಡಿ 2021 ರ ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಾಗಿ ಪ್ರೇಮಿಗಳ ದಿನದಂದೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಸಂಭ್ರಮ ಇಬ್ಬರದ್ದು. ಈ ವಿಶೇಷ ದಿನಕ್ಕೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಹರಿದುಬರುತ್ತಿದೆ.
ಇದರ ನಡುವೆ ಈ ರಿಯಲ್ ಲೈಫ್ ಜೋಡಿ ಮತ್ತೆ ತೆರೆ ಮೇಲೆ ಒಟ್ಟಾಗಿ ಅಭಿನಯಿಸಿರುವ ಲವ್ ಬರ್ಡ್ಸ್ ಸಿನಿಮಾ ಬಿಡುಗಡೆ ಖುಷಿಯಲ್ಲಿದ್ದಾರೆ. ಫೆಬ್ರವರಿ 17 ರಂದು ಲವ್ ಬರ್ಡ್ಸ್ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಿದೆ.