ಈಗ ಚಿತ್ರವೊಂದರ ಧ್ವನಿಸುರುಳಿ ಬಿಡುಗಡೆ ಎಂಬುದು ಒಂಥರಾ ಕೃತಕ ಅನ್ನಿಸಿಬಿಟ್ಟಿದೆ. ಆದರೂ ಇದಕ್ಕಾಗಿ ಅದ್ದೂರಿ ಕಾರ್ಯಕ್ರಮಗಳನ್ನು ಮಾಡಿ ಅಂತೂಇಂತೂ ಆಡಿಯೋ ಬಿಡುಗಡೆ ಎಂಬ ಗಜಪ್ರಸವ ಆಗಿಬಿಡುತ್ತದೆ. ಆಮೇಲೆ ಆ ಆಡಿಯೋಗಳು ಸೇಲಾಗದೆ, ಅದನ್ನು ಇಟ್ಟುಕೊಳ್ಳಲು ಆಗದ ಪರಿಸ್ಥಿತಿ ಆಡಿಯೋ ಕಂಪನಿಗಳದ್ದು.
ಈಗಿನ ಜಮಾನಾ ಸಿನಿಮಾ ಮಂದಿ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಯೂಟ್ಯೂಬ್, ಫೇಸ್‍ಬುಕ್ ನಂತಹ ಸಾಮಾಜಿಕ ಜಾಲತಾಣಗಳನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ’ಚೌಕ’ ಚಿತ್ರದ ಹಾಡೊಂದು ವಾಟ್ಸಾಪ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 50ನೇ ಚಿತ್ರ ’ಚೌಕ’. ಅಪ್ಪಂದಿರ ಬಗ್ಗೆ ನಾಗೇಂದ್ರ ಪ್ರಸಾದ್ ಬರೆದಿರುವ ಅಪ್ಯಾಯಮಾನವಾದ ಹಾಡು ಈಗ ಮೊಬೈಲ್‌ನಿಂದ ಮೊಬೈಲಿಗೆ ಹರಿದಾಡುತ್ತಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ "ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪಾ...." ಎಂಬ ಹಾಡನ್ನು ಅನುರಾಧಾ ಭಟ್ ಹಾಡಿದ್ದು, ಈಗ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.