ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಯಗೊಂಡಿದ್ದಾರೆ. ಅವರ ಬಲಗೈಗೆ ಪೆಟ್ಟಾಗಿದೆ. ಆದರೆ ಯಾವುದೇ ಚಿತ್ರೀಕರಣದಲ್ಲಿ ಅವರು ಈ ರೀತಿ ಮಾಡಿಕೊಂಡಿಲ್ಲ. ವರ್ಕೌಟ್ ಮಾಡಬೇಕಾದರೆ ಹೀಗಾಗಿದೆ. ಈಗ ಕೈಗೆ ಪಟ್ಟಿಕೊಂಡು ಸ್ವಲ್ಪ ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.
ದರ್ಶನ್ ಈ ರೀತಿ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ 2015ರಲ್ಲಿ ಇದೇ ರೀತಿ ವರ್ಕೌಟ್ ಮಾಡಬೇಕಾದರೆ ಭುಜದ ಭಾಗದಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಆಗ ಒಂದು ತಿಂಗಳು ವಿಶ್ರಾಂತಿ ಪಡೆದು ಚೇತರಿಸಿಕೊಂಡಿದ್ದರು. 2014ರಲ್ಲೂ ಒಮ್ಮೆ ಹೀಗೆ ಪಟ್ಟಿಕೊಂಡು ಕಾಣಿಸಿಕೊಂಡಿದ್ದರು. ಆಗಲೂ ಹದಿನೈದು ದಿನ ರೆಸ್ಟ್ ತಗೊಂಡಿದ್ದರು.
ದರ್ಶನ್ ಪದೇಪದೇ ಈ ರೀತಿ ಮಾಡಿಕೊಳ್ಳುತ್ತಿರುವುದು ಬಹುಶಃ ಅವರು ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಸದ್ಯಕ್ಕೆ ಅವರು ಚಕ್ರವರ್ತಿ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇದಾದ ಬಳಿಕ ಮಿಲನ ಪ್ರಕಾಶ್ ಅವರ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಕಿರಿಕ್ ಪಾರ್ಟಿಯಲ್ಲಿ ಅಭಿನಯಿಸಿರುವ ರಶ್ಮಿಕಾ ಮಂದಣ್ಣ ಮತ್ತು ಶ್ರುತಿ ಹರಿಹರನ್ ಈ ಚಿತ್ರದ ನಾಯಕಿಯರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.