ಚೆನ್ನೈ : ನಟ ವಿವೇಕ್ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ಸಾವಿನ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ನಟ ವಿವೇಕ್ ಅವರು ಹೃದಯಸ್ತಂಭನದಿಂದ ಸಾವನಪ್ಪಿದ್ದರು. ಆದರೆ ಅವರು ಸಾಯುವ ಹಿಂದಿನ ದಿನ ಕೊರೊನಾ ಲಸಿಕೆ ತೆಗದುಕೊಂಡಿದ್ದರು ಎನ್ನಲಾಗಿತ್ತು. ಹೀಗಾಗಿ ನಟ ಮನ್ಸೂರ್ ಅಲಿ ಖಾನ್ ಅವರು ಸರ್ಕಾರ ನಡೆಸುತ್ತಿರುವ ಕೊವಿಡ್ 19 ವ್ಯಾಕ್ಸಿನೇಷನ್ ಡ್ರೈವ್ ವಿರುದ್ಧ ಮಾತನಾಡಿದ್ದಾರೆ. ಮಾಸ್ಕ್ ಧರಿಸುವುದನ್ನು ನಿಲ್ಲಿಸುವಂತೆ ಹಾಗೂ ನಟನ ಸಾವಿಗೆ ಸರ್ಕಾರವನ್ನು ದೂಷಿಸಿದ್ದಾರೆ.
ಹೀಗಾಗಿ ಆಧಾರರಹಿತ ಆರೋಪಗಳನ್ನು ಮಾಡಿ ಸರ್ಕಾರದ ವ್ಯಾಕ್ಸಿನೇಷನ್ ಡ್ರೈವ್ ಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆತನ ವಿರುದ್ಧ ವಡಪಲನಿ ಪಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.