ತಾವು ಚಲನಚಿತ್ರಗಳಲ್ಲಿ ನಟಿಸುವ ಅವಕಾಶಕ್ಕಾಗಿ ಹಿರೋಗಳ ಜೊತೆಗೆ ಮಲಗಿಲ್ಲ.
ಹೀಗಂತ ಬಾಲಿವುಡ್ ನಟಿ ರವೀನಾ ಟಂಡನ್ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಲ್ಲಿ ಯಾರ ಸಹಾಯವೂ ಇಲ್ಲದೇ ತಾವು ಬೆಳೆದುಬಂದಿದ್ದಾಗಿ ಹೇಳಿಕೊಂಡಿರುವ ರವೀನಾ, ತಮ್ಮ ವೃತ್ತಿ ಜೀವನ ಆರಂಭದಲ್ಲಾದ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ.
ತಮಗೆ ಆಗದವರು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದರು. ಗಾಸಿಪ್ ಗಳು ಸಾಕಷ್ಟು ಹರಡುತ್ತಿದ್ದವು. ಆದರೆ ತಾವು ಮಾತ್ರ ತಮ್ಮ ಕೆಲಸದತ್ತ ಗಮನ ಹರಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.