ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಬೆಂಗಳೂರು ಕಂಬಳದಲ್ಲಿ ಕರಾವಳಿಯ ವೆಜ್, ನಾನ್ ವೆಜ್ ಭರ್ಜರಿ ಭೋಜನ ಸವಿಯುವ ಯೋಗ ಜನರದ್ದು.
ಇಂದು ಮತ್ತು ನಾಳೆ ಬರುವ ಜನರಿಗಾಗಿ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿದೆ. ವೆಜ್ ಮತ್ತು ನಾನ್ ವೆಜ್ ಎರಡೂ ಬಗೆಯ ಅಡುಗೆಗಳನ್ನು ಮಾಡಲಾಗಿದೆ. ಈ ಪೈಕಿ ನಾನ್ ವೆಜ್ ಪ್ರಿಯರಿಗಾಗಿ ಕರಾವಳಿ ಮೀನು, ಚಿಕನ್ ಸ್ಪೆಷಲ್ ಅಡುಗೆಗಳನ್ನು ತಯಾರಿಸಲಾಗುತ್ತಿದೆ.
ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಾಹಾರ, ರಾತ್ರಿಗೆ ಮತ್ತೆ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 3-4 ಲಕ್ಷ ಜನರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ. ಕರಾವಳಿ ಸ್ಪೆಷಲ್ ಅಡುಗೆ ಮಾಡಲು ಮಂಗಳೂರು ಮೂಲದ ಬಾಣಸಿಗರನ್ನೇ ಕರೆಸಿಕೊಳ್ಳಲಾಗಿದೆ.
ಉಚಿತ ಊಟದ ವ್ಯವಸ್ಥೆ ಇದ್ದಿದ್ದರಿಂದ ಇಂದು ಜನರ ನೂಕು ನುಗ್ಗಲು ಉಂಟಾಗಿತ್ತು. ನಾಳೆ ಭಾನುವಾರವಾದ್ದರಿಂದ ಮತ್ತಷ್ಟು ಜನ ಸೇರುವ ನಿರೀಕ್ಷೆಯಿದೆ. ಹೀಗಾಗಿ ನಾಳೆಯೂ ಊಟದ ಹಾಲ್ ನಲ್ಲಿ ಗೊಂದಲವುಂಟಾದರೂ ಅಚ್ಚರಿಯಿಲ್ಲ.