ಬಹುಶಃ ಶೂಟಿಂಗ್‌ನಲ್ಲೂ ಬಾಹುಬಲಿ ದಾಖಲೆ ಬರೆದಿದ್ದಾನೆ. ಸಾಮಾನ್ಯವಾಗಿ ಎರಡು ಹಂತಗಳ ಶೂಟಿಂಗ್ ಅಬ್ಬಬ್ಬಾ ಅಂದ್ರೆ ಒಂದೂವರೆ ಅಥವಾ ಎರಡು ತಿಂಗಳಲ್ಲಿ ಫಿನಿಶ್ ಆಗುತ್ತದೆ. ಆದರೆ ಬಾಹುಬಲಿ 2 ಚಿತ್ರಕ್ಕಾಗಿ ಎಸ್.ಎಸ್ ರಾಜಮೌಳಿ ತೆಗೆದುಕೊಂಡಿದ್ದು ಮೂರುವರೆ ವರ್ಷ.
ಚಿತ್ರತಂಡ ಶೂಟಿಂಗ್ ಮುಗಿದ ಮೇಲೆ ಭಾವುಕರಾದರಂತೆ. ಇಷ್ಟು ದೊಡ್ಡ ಚಿತ್ರಕ್ಕೆ ಕೆಲಸ ಮಾಡಿದ ತೃಪ್ತಿ ಅವರಲ್ಲಿ ಕಾಣುತ್ತಿತ್ತು. ಇಡೀ ದೇಶವೇ ಎದುರು ನೋಡುತ್ತಿರುವ ಚಿತ್ರದಲ್ಲಿ ಕೆಲಸ ಮಾಡಿದ ಹೆಮ್ಮೆ ಅವರದು.
ಎಲ್ಲರೂ ಒಂದೇ ತೆರನಾದ ಟೀಶರ್ಟ್ ತೊಟ್ಟು ಶೂಟಿಂಗ್ ಕೊನೆಯ ದಿನ ಎಂಜಾಯ್ ಮಾಡಿದ್ದಾರೆ. ಆದರೆ ಅವರು ತೊಟ್ಟಿದ್ದ ಟೀ ಶರ್ಟ್ ಮೇಲಿನ ಬರಹ ಈಗ ಎಲ್ಲರ ಗಮನಸೆಳೆಯುತ್ತಿದೆ. ಆ ಬರಹ ಹೀಗಿದೆ.."ಒಂದು ಅದ್ಭುತವಾದ ಅನುಭವ, 5 ವರ್ಷಗಳು, 613 ದಿನಗಳ ಶೂಟಿಂಗ್, 2 ಬ್ಲಾಕ್ ಬಸ್ಟರ್, ಲಕ್ಷ ಮಂದಿ ಯೂನಿಟ್, ಇನ್ನು ನಾನು" ಎಂಬರ್ಥದ ಟೀ ಶರ್ಟ್‍ಗಳನ್ನು ಬಾಹುಬಲಿ ಯೂನಿಟ್ ಧರಿಸಿತ್ತು.
ಬೇರೆ ವಿಚಾರಗಳನ್ನು ಪಕ್ಕಕ್ಕಿಟ್ಟರೆ, ಬಾಹುಬಲಿ ಸಿನಿಮಾಗೆ ಲಕ್ಷ ಮಂದಿ ಕೆಲಸ ಮಾಡಿದ್ದಾರೆಂಬ ಸಾಲು ಕುತೂಹಲ ಕೆರಳಿಸಿದೆ. ಬಾಹುಬಲಿ ಭಾರಿ ಬಜೆಟ್ ಚಿತ್ರದ ಎಂಬ ಬಗ್ಗೆ ಎರಡು ಮಾತಿಲ್ಲದಿದ್ದರೂ ಒಂದು ಲಕ್ಷ ಮಂದಿ ಕೆಲಸ ಮಾಡಿದ್ದಾರೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.