Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

’ಬ್ಯಾಡ್ ಬಾಯ’ ಮ್ಯೂಸಿಕ್ ಆಲ್ಬಂ ಕನ್ನಡ ಖಳನಟರಿಗೆ ಅರ್ಪಣೆ

’ಬ್ಯಾಡ್ ಬಾಯ’ ಮ್ಯೂಸಿಕ್ ಆಲ್ಬಂ ಕನ್ನಡ ಖಳನಟರಿಗೆ ಅರ್ಪಣೆ
Bangalore , ಮಂಗಳವಾರ, 3 ಜನವರಿ 2017 (12:41 IST)
ಕನ್ನಡ ಚಿತ್ರರಂಗದ ಖಳನಾಯಕರ ಹಿನ್ನೆಲೆಯಲ್ಲಿ ನಿರ್ಮಾಣವಾದ ಕನ್ನಡ ವೀಡಿಯೋ ಆಲ್ಬಂ ಒಂದು ಈಗ ಬಿಡುಗಡೆ ಆಗಿದೆ. ಉಷಾ ರಾವ್ ನಿರ್ಮಾಣದ ಈ ಆಲ್ಬಂ ಬಿಡುಗಡೆ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ನಿರ್ಮಾಪಕ ಕೆ.ಮಂಜು ಮುಖ್ಯ ಅತಿಥಿಯಾಗಿ ಭಾಗವಹಿಸಿ ಈ ಸಿ.ಡಿ. ಬಿಡುಗಡೆ ಮಾಡಿ ಈ ತಂಡಕ್ಕೆ ಶುಭ ಹಾರೈಸಿದರು. 
 
ಸಿದ್ದಾರ್ಥ ಈ ಆಲ್ಬಂಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಂಜೇಶ್ ಹಾಗೂ ಸಿದ್ಧಾರ್ಥ ಸೇರಿ ಸಾಹಿತ್ಯ ರಚಿಸಿದ್ದಾರೆ. ಈ ಆಲ್ಬಂನ ವಿಶೇಷತೆ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಸಿದ್ಧಾರ್ಥ ಕನ್ನಡ ಖಳ ನಟರಿಗೆ ಈ ಹಾಡನ್ನು ಸಮರ್ಪಿಸಿದ್ದೇವೆ. ಅಶ್ವಿನ್ ನನ್ನ ಬಳಿ ಬಂದು ಈ ಕಾನ್ಸೆಪ್ಟ್ ಬಗ್ಗೆ ಹೇಳಿದಾಗ ನನಗೂ ಒಂದು ರೀತಿಯ ಕುತೂಹಲ ಹುಟ್ಟಿತು. ಇದರಲ್ಲಿ ಎಲ್ಲಾ ತಂತ್ರಜ್ಞರು ತುಂಬಾ ಅಧ್ಬತವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು. 
 
ಸಾಹಿತ್ಯ ರಚಿಸಿದ ಮಂಜೇಶ್ ಮಾತನಾಡಿ ಒಂದು ಸಿನಿಮಾದಲ್ಲಿ ನಾಯಕನ ಪಾತ್ರದಷ್ಟೆ ಖಳನಾಯಕನ ಪಾತ್ರಕ್ಕೂ ಪ್ರಮುಖ್ಯತೆ ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ ಕಣ್ಮರೆಯಾದ ಖಳನಾಯಕ ನಟರ  ನೆನಪಿಗಾಗಿ ಈ ಆಲ್ಬಂ ಮಾಡಿದ್ದೇವೆ ಎಂದು ಹೇಳಿದರು. 
 
ಸಮಾರಂಭದ ಮುಖ್ಯ  ಅತಿಥಿಯಾಗಿದ್ದ ಕೆ.ಮಂಜು ಮಾತನಾಡಿ ಆಶ್ವಿನ್ ರಾವ್ ಬ್ಯಾಡ್ ಬಾಯ್ ಪಾತ್ರ ಮಾಡಿದ್ದರೂ ಮೂಲತಃ ಗುಡ್ ಬಾಯ್. ನಾವು ಈವರೆಗೆ ಬರೀ ಹಿಂದಿ, ಇಂಗ್ಲೀಷ್‍ನಲ್ಲಿ ಮಾತ್ರ ಈ ತರಹದ ಆಲ್ಬಂಗಳನ್ನು ನೋಡುತ್ತಿದ್ದೆವು. ಈಗ ಕನ್ನಡದಲ್ಲೂ ಇಂಥ ಹೊಸ ಪ್ರಯೋಗಗಳು ನಡೆಯುತ್ತಿರುವುದು ಖುಷಿ ತಂದಿದೆ.
 
ಅಲ್ಲದೆ ಯೂಟ್ಯೂಬ್‍ನಲ್ಲೂ ಈ ಹಾಡುಗಳಿಗೆ ಒಳ್ಳೆ ಲಾಭ ಬರುತ್ತಿದೆ. ಕೇವಲ ಮೂರು ದಿನಗಳಲ್ಲಿ ಇಂತಹ ಅಧ್ಬುತವಾದ ಹಾಡನ್ನು ಚಿತ್ರಿಕರಿಸಿದ್ದಾರೆ. ಒಳ್ಳೆ ಪ್ರೋತ್ಸಾಹ ಸಿಕ್ಕರೆ ಇಂತ ಇನ್ನೂ ಅನೇಕ ಪ್ರತಿಭೆಗಳು ಹೊರಬರುತ್ತವೆ. ಇದರಲ್ಲಿ ಕೆಲಸ ಮಾಡಿದ ಕ್ಯಾಮರಾಮ್ಯಾನ್, ಕೋರಿಯೊಗ್ರಾಫರ್ ಎಲ್ಲರೂ ಅಧ್ಬುತವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
 
ಛಾಯಾಗ್ತಾಹಾಕ ಪ್ರಸನ್ನ ಮಾತನಾಡಿ ಈ ಹಿಂದೆ ಹಲವಾರು ಅ್ಯಡ್ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ಮೂಡಿ ಬರುವಂತೆ ಎಫರ್ಟ್  ಹಾಕಿದ್ದೇನೆ ಎಂದು ಹೇಳಿದರು. ನಿರ್ದೇಶಕ ಪ್ರಭು ಮಾತನಾಡಿ ಕನ್ನಡ ಮ್ಯೂಸಿಕ್ ಆಲ್ಬಂ ಹೊರತರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದಕ್ಕೆ ಸಹಕರಿಸಿದ ಎಲ್ಲಾ ತಂತ್ರಜ್ಞರಿಗೂ ನನ್ನ ಧನ್ಯವಾದಗಳು ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಕ್ಸಾಫೀಸಲ್ಲಿ ಅಮೀರ್ ಖಾನ್ ಚಿತ್ರ ಲುಂಗಿ ಡ್ಯಾನ್ಸ್