ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪುತ್ರಿ ಐರಾ ಯಶ್ ಮುದ್ದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಅಪ್ಪನ ಬರ್ತ್ ಡೇಗೆ ಅಮ್ಮ ರಾಧಿಕಾ ಪಂಡಿತ್ ಜತೆ ಸೇರಿಕೊಂಡು ಕೇಕ್ ಮಾಡುತ್ತಿರುವ ದೃಶ್ಯಗಳನ್ನು ಸ್ವತಃ ರಾಧಿಕಾ ಪ್ರಕಟಿಸಿದ್ದಾರೆ.
ವಿಶೇಷವೆಂದರೆ ಯಶ್ ಇನ್ ಸ್ಟಾಗ್ರಾಂ ಖಾತೆ ಮೂಲಕ ರಾಧಿಕಾ ಈ ವಿಡಿಯೋ ಅಪ್ ಲೋಡ್ ಮಾಡಿ ತಮ್ಮ ಮುದ್ದಿನ ಪತಿಗೆ ವಿಶ್ ಮಾಡಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಮೈ ತುಂಬಾ ಕೇಕ್ ಕ್ರೀಂ ಮೆತ್ತಿಕೊಂಡು ಮಧ್ಯೆ ಅದನ್ನು ತಿನ್ನುತ್ತಾ ಅಮ್ಮನಿಗೆ ಕೇಕ್ ಮಾಡಲು ಹೆಲ್ಪ್ ಮಾಡುವ ಐರಾ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಜತೆಗೆ ತನ್ನದೇ ಮುದ್ದು ಭಾಷೆಯಲ್ಲಿ ಹ್ಯಾಪೀ ಬರ್ತ್ ಡೇ ಡಾಡೂ ಎಂದು ವಿಶ್ ಕೂಡಾ ಮಾಡಿದ್ದಾಳೆ. ಅಂದ ಹಾಗೆ ಪ್ರತೀ ವರ್ಷ ಬರ್ತ್ ಡೇಗೆ ಯಶ್ ಗೆ ರಾಧಿಕಾಳೇ ಕೇಕ್ ಮಾಡಬೇಕೆಂದು ಆಸೆಯಂತೆ. ಅದರಂತೆ ರಾಧಿಕಾ ಖುದ್ದಾಗಿ ತಾವೇ ಕೇಕ್ ತಯಾರಿಸಿ ಕೊಟ್ಟಿದ್ದಾಳೆ.