ಸ್ಯಾಂಡಲ್ವುಡ್ನಲ್ಲಿ ಸದ್ಯ ನಾರಾಯಣ ಜಪ ಶುರುವಾಗಿದೆ. ಬಾಕ್ಸ್ ಆಫೀಸ್ನಲ್ಲಿ ನಾಗಾಲೋಕ ಮುಂದುವರೆಸಿರೋ ಅವನೇ ಶ್ರೀಮನ್ನಾರಾಯಣನಿಗೆ ಮಹಾ ಮೋಸವೊಂದು ಆಗ್ತಿದೆ. ಅದು ಬೇರ್ಯಾರು ಅಲ್ಲ ಮಹಾರಾಷ್ಟ್ರದ ಜನತೆಯಿಂದ. ಮರಾಠಿ ಭಾಷೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಾರ್ಹ ಅಂಶ ಈ ಸಿನಿಮಾದಲ್ಲಿ ಇಲ್ಲ. ಹೀಗಿದ್ದರೂ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಲವೆಡೆ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡಲಾಗಿದೆ. ಅಲ್ಲದೆ, ಪೋಸ್ಟರ್‌ಗಳನ್ನು ಕಿತ್ತು ಹಾಕಲಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗಾ ವಿವಾದ ಭುಗಿಲೇಳುತ್ತಿರುತ್ತವೆ. ಇದೀಗ ಮತ್ತೆ ಗಡಿ ವಿವಾದ ಹುಟ್ಟಿಕೊಂಡಿದೆ. ಅದು ಶ್ರೀಮನ್ನಾರಾಯಣ ಸಿನಿಮಾ ಯಶಸ್ಸಿ ಪ್ರದರ್ಶನ ಕಾಣುತ್ತಿರೋ ಹೊತ್ತಲ್ಲೇ ಶಿವಸೇನೆ ದರ್ಪ ಮೆರದಿದೆ. ಶ್ರೀಮನ್ನಾರಾಯಣ ಸಿನಿಮಾ ಪ್ರದರ್ಶನಕ್ಕೆ ಶಿವಸೇನಾ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಹೀಗಾಗಿ ಸಿನಿಮಾದ ಕಲೆಕ್ಷನ್ಗೆ ಭಾರೀ ಪೆಟ್ಟು ಬೀಳುತ್ತದೆ.
ರಾಜ್ಯಾದ್ಯಂತ ಭರ್ಜರಿ ಸಕ್ಸಸ್ನಲ್ಲಿರೋ ಅವನೇ ಶ್ರೀಮನ್ನಾರಾಯಣನಿಗೆ ವಿದೇಶಗಳಲ್ಲೂ ಬಹುಪಾರಕ್ ಅಂತಿದ್ದಾರೆ. ಎಲ್ಲೆಲ್ಲಿಯೋ ನಾರಾಯಣ, ನಾರಾಯಣ ಅನ್ನೋ ಜಪ ಶುರುವಾಗಿದೆ. ಇನ್ನೇನು ನಾಳೆಯಿಂದ ತೆಲುಗಿನಲ್ಲಿ ‘ಅವನ’ ದರ್ಶನ ಶುರುವಾಗ್ತಿದ್ದು, ಪ್ಯಾನ್ ಇಂಡಿಯಾ ತುಂಬೆಲ್ಲಾ ರಕ್ಷಿತ್ ಶೆಟ್ಟಿ ಅಬ್ಬರಿಸಿ, ಕೇಕೇ ಹಾಕಲಿದ್ದಾರೆ. ಅಂದಹಾಗೇ ಸಿನಿಮಾಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದು, ಸಿಂಪಲ್ ಸ್ಟಾರ್ಗೆ ಜೋಡಿಯಾಗಿ ಶಾನ್ವಿ ಶ್ರೀವಾಸ್ತವ್ ಬಣ್ಣ ಹಚ್ಚಿದ್ದಾರೆ. ಇನ್ನು, ಸಚಿನ್ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.