Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕ ಚಲನಚಿತ್ರ ಪ್ರಶಸ್ತಿ, ಸಹಾಯಧನ ಬೇಕೆ?

ಕರ್ನಾಟಕ ಚಲನಚಿತ್ರ ಪ್ರಶಸ್ತಿ, ಸಹಾಯಧನ ಬೇಕೆ?
Bangalore , ಮಂಗಳವಾರ, 3 ಜನವರಿ 2017 (09:43 IST)
2016 ನೇ ಕ್ಯಾಲೆಂಡರ್ ವರ್ಷದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಕಥಾನಕ ಚಲನಚಿತ್ರ/ಮಕ್ಕಳ ಚಿತ್ರ ಪ್ರಶಸ್ತಿ , ಕಿರುಚಿತ್ರ ಪ್ರಶಸ್ತಿ, ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಹಾಗೂ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
 01/01/2016 ರಿಂದ 31/12/2016 (ಎರಡು ದಿನಗಳು ಸೇರಿದಂತೆ ) ರವರೆಗೆ ಸಿಬಿಎಫ್‍ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸೆನ್ಸಾರ್ ) ಯಿಂದ ಪ್ರಮಾಣ ಪತ್ರ ಪಡೆದಿರುವ ಚಲನಚಿತ್ರ ಗಳು/ ಮಕ್ಕಳ ಕಥಾನಕ ಚಿತ್ರಗಳು ಪ್ರಶಸ್ತಿಗೆ ಮತ್ತು ಸಹಾಯಧನಕ್ಕೆ ಅರ್ಹವಾಗಿರುತ್ತವೆ.
 
2016 ನೇ ಸಾಲಿನಲ್ಲಿ ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗಿರುವ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಕನ್ನಡ ಹಾಗೂ ಆಂಗ್ಲ ಭಾಷೆ ಪುಸ್ತಕಗಳು ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಅರ್ಹವಾಗಿರುತ್ತವೆ.
 
ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆ ಅಪೂರ್ವ ಕೊಡುಗೆ ನೀಡಿದ ಸಾಧಕರಿಗೆ “ಡಾ.ರಾಜ್ ಕುಮಾರ್ ಪ್ರಶಸ್ತಿ “ಯನ್ನು , ರಾಜ್ಯದ ಚಲನಚಿತ್ರ ರಂಗದಲ್ಲಿ ನಿರ್ದೇಶನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ನಿರ್ದೇಶಕರನ್ನು ಗುರುತಿಸಿ “ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ “ ಮತ್ತು ಕನ್ನಡ ಚಲನಚಿತ್ರದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಚೇತನಗಳಿಗೆ “ ಡಾ.ವಿಷ್ಣುವರ್ಧನ್ ಪ್ರಶಸ್ತಿ “ ನೀಡಲಾಗುತ್ತದೆ. 
 
2016 ನೇ ಕ್ಯಾಲೆಂಡರ್ ವರ್ಷದ ಜೀವಿತಾವಧಿ ಸಾಧನೆ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲು ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ನಾಮ ನಿರ್ದೇಶನ ಮಾಡುವವರ ಹೆಸರು, ಸಾಧನೆ/ಕೊಡುಗೆಗಳುಳ್ಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೀಡಬಹುದಾಗಿದೆ.
 
ಅರ್ಜಿ ಹಾಗೂ ನಾಮನಿರ್ದೇಶನಗಳನ್ನು ನಿರ್ದೇಶಕರು , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು ಇವರಿಗೆ ದಿನಾಂಕ: 31-01-2017 ರೊಳಗೆ ತಲುಪುವಂತೆ ಕಳುಹಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ್ ಕುಮಾರ್ ಮುಂದಿನ ಚಿತ್ರ ಪ್ಯಾಡ್‌ಮ್ಯಾನ್