ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದರೆ ಅವರ ಪತ್ನಿ ಅನುಷ್ಕಾ ಶರ್ಮಾ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ!
ಮಗುವಾದ ಬಳಿಕ ಅನುಷ್ಕಾ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಸಿನಿಮಾ ಚಕ್ದಾ ಎಕ್ಸ್ ಪ್ರೆಸ್. ಈ ಸಿನಿಮಾ ಭಾರತ ಮಹಿಳಾ ಕ್ರಿಕೆಟ್ ತಾರೆ ಜೂಲಾನ್ ಗೋಸ್ವಾಮಿ ಅವರ ಜೀವನಾಧಾರಿತ ಕತೆ ಹೊಂದಿದೆ. ಈ ಸಿನಿಮಾದಲ್ಲಿ ಅನುಷ್ಕಾ, ಜೂಲಾನ್ ಆಗಿ ಪಾತ್ರ ನಿರ್ವಹಿಸಲಿದ್ದಾರೆ.
ಈ ಕಾರಣಕ್ಕೆ ಅನುಷ್ಕಾ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಈ ಮೂಲಕ ತಾವೂ ಪ್ರೊಫೆಷನಲ್ ಕ್ರಿಕೆಟ್ ಆಟಗಾರ್ತಿಯಂತೆ ಕಾಣಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.